ಬೆಂಗಳೂರು : ಇತ್ತೀಚೆಗಷ್ಟೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಬುಲೋರೋ ವಾಹನದ ಮೇಲೆ ಚಿರತೆ ದಾಳಿ ನಡೆಸಿತ್ತು, ದಾಳಿ ವೇಳೆ ಬಾಲಕನೋರ್ವನ ಕೈಗೆ ಉಗುರಿನಿಂದ ಚಿರತೆ ಗಾಯ ಮಾಡಿತ್ತು. ಈ ಘಟನೆ ನಡೆದ ಎರಡೇ ದಿನಗಳಲ್ಲಿ ಮತ್ತೊಮ್ಮೆ ಚಿರತೆ ದಾಳಿ ಮಾಡಿದೆ.
ಸಫಾರಿಗೆ ತೆರಳಿದ್ದ KSTDC ಬಸ್ ಮೇಲೆ ಚಿರತೆ ದಾಳಿ ನಡೆಸಿದೆ. ಪ್ರವಾಸಿಗರನ್ನು ಕೂರಿಸಿಕೊಂಡು ಅರಣ್ಯಪ್ರದೇಶಕ್ಕೆ ಸಫಾರಿಗೆಂದು ವಾಹನ ತೆರಳುತ್ತಿತ್ತು. ಈ ವೇಳೆ ರಸ್ತೆ ಪಕ್ಕದಲ್ಲೇ ಕುಳಿತುಕ್ಕೊಂಡಿದ್ದ ಚಿರತೆ KSTDC ಯ ಸಫಾರಿ ಮಿನಿ ಬಸ್ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಬಸ್ಸಿನ ಕಿಟಕಿಗೆ ಚಿರತೆ ಹಾರಿ ದಾಳಿ ಮಾಡಿದ್ದು, ಸೀಟ್ ಪಕ್ಕದಲ್ಲೇ ಕುಳಿತಿದ್ದ ಪ್ರವಾಸಿಗರು ಬೆಚ್ಚಿಬಿದ್ದಿದ್ದು, ಯಾವುದೇ ಅನಾಹುತ ನಡೆದಿಲ್ಲ.
ಇನ್ನು, ಈ ದೃಶ್ಯ ಹಿಂಬದಿಯಿಂದ ಬರ್ತಿದ್ದ ಮತ್ತೊಂದು ಸಫಾರಿ ಬಸ್ ನಲ್ಲಿದ್ದ ಪ್ರವಾಸಿಗರ ಮೊಬೈಲ್ ನಲ್ಲಿ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.