ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರಿಬ್ಬರು ಜಾತಿ ಹಾಗೂ ಪಕ್ಷ ಸಿದ್ಧಾಂತ ಮೀರಿ ಬೀಗರಾಗಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕಪಡಿಸಿ, ಹಾರೈಸಿದ್ದಾರೆ.
ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಕಾಂಗ್ರೆಸ್ ನ ನಗರಾಭಿವೃದ್ಧಿ ಸಚಿವವ ಭೈರತಿ ಸುರೇಶ್ ಈಗ ಜಾತಿ ಮೀರಿ ಬೀಗರಾಗಿದ್ದಾರೆ. ವಿಶ್ವನಾಥ್ ಬಿಜೆಪಿಯ ಯಲಹಂಕ ಶಾಸಕ. ಬೈರತಿ ಸುರೇಶ್ ಪಕ್ಕದ ಹೆಬ್ಬಾಳ ಕ್ಷೇತ್ರದ ಶಾಸಕ. ವಿಶ್ವನಾಥ್ ಅವರ ಪುತ್ರಿ ಅಪೂರ್ವ ಹಾಗೂ ಬೈರತಿ ಸುರೇಶ್ ಪುತ್ರ ಸಂಜಯ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿಯ ಪ್ರೀತಿಗೆ ಕುಟುಂಬಸ್ಥರು ಕೂಡ ಒಪ್ಪಿಕೊಂಡಿದ್ದು, ಇಂದು ನಿಶ್ಚಿತಾರ್ಥ ಕಾರ್ಯ ನಡೆಯಿತು.
ಎರಡು ಭಿನ್ನ ವಿಚಾರಧಾರೆಗಳ ಪಕ್ಷಗಳ ನಾಯಕರಾಗಿದ್ದರೂ ಬೀಗರಾಗುತ್ತಿರುವುದು ವಿಶೇಷವಾಗಿದೆ. ಇಡೀ ರಾಜ್ಯದ ಜನರು ಕುತೂಲಹಲದಿಂದ ನೋಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಅಪೂರ್ವ ಮತ್ತು ಸಂಜಯ್ ನಿಶ್ಚಿತಾರ್ಥ ಸಮಾರಂಭದಲ್ಲಿ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಸೇರಿದಂತೆ ಎರಡೂ ಪಕ್ಷದ ಶಾಸಕರು, ಸಚಿವರು ಭಾಗಿಯಾಗಿ, ಹಾರೈಸಿದ್ದಾರೆ. ಸಿದ್ದರಾಮಯ್ಯ ಅವರು ಈ ಜೋಡಿ ನೋಡಿ ಸಂತಸ ಪಟ್ಟಿದ್ದಾರೆ.