ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದಾಗ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬುಧವಾರ ಸಂಭವಿಸಿದೆ.

ಹುಲಿಕಲ್ ಘಾಟಿಯ ದೇವಸ್ಥಾನದ ತಿರುವಿನಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಏಕಾಏಕಿ ಮಣ್ಣು ಜಾರಿ ಕಾರ್ಮಿಕರ ಮೇಲೆ ಬಿದ್ದಿದೆ. ಸ್ಥಳದಲ್ಲಿದ್ದ ರಾಘವೇಂದ್ರ (37), ಚಕ್ಕಾರು ನಗರ ನಿವಾಸಿ, ರಾಜು(30) ನೀಲವಗಲ್ಲು, ಹಾವೇರಿ ತಾಲ್ಲೂಕು ಮತ್ತು ಶಬ್ಬೀರ್ (40) ನೀಲವಗಲ್ಲು ನಿವಾಸಿ ಮೃತಪಟ್ಟಿದ್ದಾರೆ.
ಇನ್ನೂ ನಾಲ್ವರಿಗೆ ಗಂಭೀರ ಗಾಯಗೊಂಡಿರುವ ಕಾರ್ಮಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ನಗರ ಠಾಣೆ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಸಾವಿನ ಸಂಖ್ಯೆ ಮತ್ತು ನಾಪತ್ತೆಯಾದವರ ಕುರಿತ ವಿವರಗಳು ಇನ್ನೂ ಸ್ಪಷ್ಟವಾಗಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೇಗೂರು ಉಪ ತಹಶೀಲ್ದಾರ್ ದೀಪಕ್ ಅಮಾನತು – ಪ್ರಾದೇಶಿಕ ಆಯುಕ್ತರಿಂದ ಶಿಸ್ತು ಕ್ರಮ



















