ಚಿಕ್ಕಬಳ್ಳಾಪುರ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ವಿಚಾರವಾಗಿ ಮಚ್ಚು ತೋರಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಜಿಲ್ಲೆಯ ಮಂಚನಬೆಲೆ ಪಂಚಾಯಿತಿ ವ್ಯಾಪ್ತಿಯ ಗುಂಡ್ಲಗುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಮೀನು ವಿವಾದ ಮೂರು ಜನ ಗಂಡು ಮಕ್ಕಳ ಮಧ್ಯೆ ಇತ್ತು ಎನ್ನಲಾಗಿದೆ. ಹೀಗಾಗಿ ಆಟೋ ಚಾಲಕ ಮುನಿರಾಜು ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಚಿಕ್ಕಪ್ಪ ನರಸಿಂಹಮೂರ್ತಿಯಿಂದಲೇ ದೊಡ್ಡಪ್ಪನ ಮಗನ ವಿರುದ್ಧ ಸುಪಾರಿ ನೀಡಲಾಗಿದೆ ಎನ್ನಲಾಗಿದೆ. ಹೀಗಾಗಿ ನಮಗೇನಾದರು ಆದರೆ ಚಿಕ್ಕಪ್ಪ ಹಾಗೂ ಆತನ ಕುಟುಂಬ ಕಾರಣ ಎಂದು ಅನಿಲ್ ಕುಮಾರ್ ಆರೋಪಿಸಿದ್ದಾರೆ.