ಬೆಂಗಳೂರು: ಬೀದರ್ ನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (KVAFSU Recruitment 2025) ಖಾಲಿ ಇರುವ 2 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಹುದ್ದೆಗಳ ಹೆಸರು, ನೇಮಕಾತಿ ವಿಧಾನ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೇರಿ ವಿವಿಧ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ
ಹುದ್ದೆಗಳ ಹೆಸರು: ಸ್ಟೆನೊಗ್ರಾಫರ್, ಸೆಕೆಂಡ್ ಡಿವಿಷನ್ ಅಸಿಸ್ಟಂಟ್ (ಎಸ್ ಡಿ ಎ)
ಒಟ್ಟು ಹುದ್ದೆಗಳು: 02
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 30
ಉದ್ಯೋಗ ಸ್ಥಳ: ಬೀದರ್, ಕರ್ನಾಟಕ
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಪಿಯುಸಿ ಹಾಗೂ ಪದವಿ ಕೋರ್ಸ್ ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ 18ರಿಂದ ಗರಿಷ್ಠ 43 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಒಂದು ಸ್ಟೆನೊಗ್ರಾಫರ್, ಸೆಕೆಂಡ್ ಡಿವಿಷನ್ ಅಸಿಸ್ಟಂಟ್ (ಎಸ್ ಡಿ ಎ) ಹುದ್ದೆ ಖಾಲಿ ಇದ್ದು, ನೇಮಕಾತಿ ಹೊಂದಿದವರಿಗೆ ಮಾಸಿಕ 34,100 – 67,600 ರೂ. ನೀಡಲಾಗುತ್ತದೆ. ಸ್ಟೆನೊಗ್ರಾಫರ್ ಹುದ್ದೆಗೆ ನೇಮಕಗೊಂಡವರಿಗೆ ಮಾಸಿಕ 44,425 – 83,700 ರೂ. ನೀಡಲಾಗುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ kvafsu.edu.in ವೆಬ್ ಸೈಟ್ ಗೆ ಸಂಪರ್ಕಿಸಿ.
ಅರ್ಜಿ ಸಲ್ಲಿಸಬೇಕಾದ ವಿಳಾಸ
The Registrar, Karnataka Veterinary, Animal and Fisheries Sciences University, Nandinagar, P.B.NO-O6, Bidar-585226, Karnataka