ಬೆಂಗಳೂರು : ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ಬೆಂಗಳೂರಿನ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಕೂಡ ಸಾವನ್ನಪ್ಪಿದ್ದಾರೆ. ಅನುಷಾ, ಗನ್ನಮನೇನಿ ಧಾತ್ರಿ ಮೃತ ದುರ್ದೈವಿಗಳು.
ಮಹೇಶ್ವರಂ ಅನುಷಾ ರೆಡ್ಡಿ ಮೂಲತಃ ಯದಾದ್ರಿ ಭುವನಗಿರಿ ಜಿಲ್ಲೆಯ ವಸ್ತಕೊಂಡೂರು ಗ್ರಾಮದವರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ದೀಪಾವಳಿ ಹಬ್ಬ ಮುಗಿಸಿ ಬರುತ್ತಿದ್ದ ಅನುಷಾ ಬಸ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಗನ್ನಮನೇನಿ ಧಾತ್ರಿ ಬಾಪಟ್ಲ ಜಿಲ್ಲೆಯವರು. ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವೇಳೆ ಸಾವನ್ನಪ್ಪಿದ್ದು, ಬದುಕು ದುರಂತ ಅಂತ್ಯ ಕಂಡಿದೆ.

ಇನ್ನು ಈ ದುರಂತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಸಜೀವದಹನವಾಗಿದ್ದಾರೆ. ನಿದ್ರೆ ಮಂಪರಿನಲ್ಲಿದ್ದ ಸುಂದರ ಕುಟುಂಬ ಬೆಳಗಿನ ಸೂರ್ಯೋದಯ ನೋಡುವುದಕ್ಕೆ ಮುನ್ನವೇ ಸಾವಿನ ಮನೆಗೆ ಪ್ರಯಾಣಿಸಿದೆ.

ಬೆಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು 41 ಮಂದಿ ಪ್ರಯಾಣಿಕರಿದ್ದರು. ಸದ್ಯ 20 ಪ್ರಯಾಣಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈವರೆಗೆ 11 ಮೃತದೇಹಗಳನ್ನ ಹೊರ ತೆಗೆಯಲಾಗಿದ್ದು, ಮೃತದೇಹ ಪತ್ತೆಹಚ್ಚುವ ಕಾರ್ಯವೂ ನಡೆದಿದೆ. ವಿಧಿವಿಜ್ಞಾನ ತಜ್ಞರು ಮೃತ ದೇಹಗಳ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗಳನ್ನು ನಡೆಸಿದ ನಂತರ ಪೊಲೀಸರು ಮೃತರ ವಿವರಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಘಟನಾ ಸ್ಥಳದಿಂದ ಡ್ರೈವರ್ ಎಸ್ಕೇಪ್ ಆಗಿದ್ದು, ನಿರ್ವಾಹಕನನ್ನ ವಶಕ್ಕೆ ಪಡೆಯಲಾಗಿದೆ.
ಬಸ್‌ನಲ್ಲಿದ್ದವರ ಪಟ್ಟಿ ಹೀಗಿದೆ :
ಅಶ್ವಿನ್ ರೆಡ್ಡಿ (36), ಜಿ.ಧಾತ್ರಿ (27), ಕೀರ್ತಿ (30), ಪಂಕಜ್ (28), ಯುವನ್ ಶಂಕರ್ ರಾಜು (22), ತರುಣ್ (27), ಆಕಾಶ್ (31), ಗಿರಿರಾವ್ (48), ಬುನ್ಸಾಯ್ (33), ಗಣೇಶ್ (30), ಜಯಂತ್ ಪುಷ್ವಾಹ (27), ಪಿಲ್ವಾಮಿನ್ ಬೇಬಿ (30), ರಮೇಶ್ ಕುಮಾರ್ (30) ಮತ್ತು ಅವರ ಕುಟುಂಬದವರು (64), ಕೆ. ಅನುಷಾ (22), ಮೊಹಮ್ಮದ್ ಕೈಸರ್ (51), ದೀಪಕ್ ಕುಮಾರ್ (24), ಆಂದೋಜ್ ನವೀನ್ ಕುಮಾರ್ (26), ಪ್ರಶಾಂತ್ (32), ಎಂ. ಸತ್ಯನಾರಾಯಣ (28), ಮೇಘನಾಥ್ (25), ವೇಣು ಗುಂಡ (33), ಚರಿತ್ (21), ಚಂದನ ಮಂಗ (23), ಸಂಧ್ಯಾರಾಣಿ ಮಂಗಾ (43), ಗ್ಲೋರಿಯಾ (24), ಎಲ್ಲೆಸಾ ಎಸ್. ಶ್ರೀಹರ್ಷ (24), ಶಿವ (24), ಶ್ರೀನಿವಾಸ ರೆಡ್ಡಿ (40), ಸುಬ್ರಹ್ಮಣ್ಯಂ (26), ಕೆ. ಅಶೋಕ್ (27), ಎಂ.ಜಿ. ರಾಮ ರೆಡ್ಡಿ (50), ಉಮಾಪತಿ (32), ಅಮೃತ್ ಕುಮಾರ್ (18), ವೇಣುಗೋಪಾಲ್ ರೆಡ್ಡಿ (24).



















