ಚಿತ್ರದುರ್ಗ: ಕೋಟೆನಾಡಿನ ಕುಂಚಿಗನಾಳ್ ಕಣಿವೆ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಗುಡ್ಡ ಹೊತ್ತಿ ಉರಿದಿದೆ.
ಚಿತ್ರದುರ್ಗ ನಗರದ ಕುಂಚಿಗನಾಳ್ ಕಣಿವೆ ಬಳಿ ಇರುವ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಗುಡ್ಡ ಧಗ ಧಗ ಹೊತ್ತಿ ಉರಿದಿದೆ. ಈ ಗುಡ್ಡ ಜೋಗಿ ಮಟ್ಟಿ ಅರಣ್ಯ ವ್ಯಾಪ್ತಿಗೆ ಒಳಪಡುತ್ತದೆ. ಬೆಂಕಿಯ ಕೆನ್ನಾಲೆಗೆ ಗುಡ್ಡದಲ್ಲಿನ ಮರ-ಗಿಡಗಳು, ಹುಲ್ಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.