ಕೊಪ್ಪಳ : ಗಾಂಜಾ ಸೇವಿಸಿ ಕಂಡ ಕಂಡಲ್ಲಿ ಉಗುಳುತ್ತಿದ್ದವರಿಗೆ ನ್ಯಾಯಾಲಯವು ಆವರಣ ಸ್ವಚ್ಚಗೊಳಿಸುವಂತೆ ಶಿಕ್ಷೆ ಒದಗಿಸಿದ್ದು, ಜೊತೆಗೆ ದಂಡ ವಿಧಿಸುವಂತೆ ಆದೇಶಿಸದೆ.
ಗಂಗಾವತಿ ಪ್ರಧಾನ ನ್ಯಾಯಧೀಶರಾದ ನಾಗೇಶ ಪಾಟೀಲರು ಈ ರೀತಿಯ ಶಿಕ್ಷೆ ಒದಗಿಸಿದ್ದಾರೆ. ಗಂಗಾವತಿಯ ಪಂಪಾನಗರದ ರಾಜು ಮತ್ತು ವಿವೇಕಾನಂದ ಕಾಲೋನಿ ಪವನಕುಮಾರನಿಗೆ ಶಿಕ್ಷೆ ನೀಡಿದ್ದಾರೆ.
ಕಂಪ್ಲಿ ರಸ್ತೆ ಬಳಿ ಗಾಂಜಾ ಸೇವನೆ ಮಾಡುತ್ತಿದ್ದರು ಎಂಬ ಆರೋಪವಿತ್ತು. ಮಾರ್ಚ್ 19ರಂದು ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರ ನಡೆಸಿ ನ್ಯಾಯಾಧೀಶರು ಇಬ್ಬರಿಗೂ ಒಂದು ದಿನ ನ್ಯಾಯಲಯ ಆವರಣ ಸ್ವಚ್ಛಗೊಳಿಸಬೇಕು ಮತ್ತು 5000ರೂ. ದಂಡ ವಿಧಿಸಬೇಕೆಂದು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಚಿನ್ನ ಖರೀದಿದಾರರೇ ಎಚ್ಚರ : ಸೆಬಿ ಕೊಟ್ಟಿರೋ ಈ ವಾರ್ನಿಂಗ್ ನಿಮಗೆ ತಿಳಿದಿರಲಿ



















