ಕೋಲಾರ : ಕೋಲಾರದ ಮಾಲೂರು ನಗರದ ಧರ್ಮರಾಯಸ್ವಾಮಿ ದೇಗುಲದ ಕರಗದ ಪೂಜಾರಿ ಇಂದು ಬೆಳಗ್ಗೆ ಹೃದಯಾಘಾತದಿಂದ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಾಲೂರಿನ ಶಕ್ತಿನಗರ ನಿವಾಸಿ ಮಂಜುನಾಥ್ (45) ನಿಧನರಾಗಿದ್ದಾರೆ. ಇವರು ಎರಡು ಬಾರಿ ಐತಿಹಾಸಿಕ ಮಾಲೂರು ಹೂವಿನ ಕರಗ ಹೊತ್ತಿದ್ದರು. ಈ ಬಾರಿಯೂ ಮತ್ತೊಮ್ಮೆ ಹೂವಿನ ಕರಗ ಹೊರುವ ಜವಾಬ್ದಾರಿ ಹೊಂದಿದ್ದರು. ಇವರ ನಿಧನಕ್ಕೆ ವಹ್ನಿಕುಲ ಕ್ಷತ್ರಿಯ ಸಮಾಜದ ನಾಯಕರ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ : ಗಾಂಜಾ ಅಮಲಿನಲ್ಲಿ ಯುವಕನ ಬರ್ಬರ ಹತ್ಯೆ | ವಿಡಿಯೋ ಮಾಡಿ ವಿಕೃತಿ ಮೆರೆದ ವ್ಯಸನಿ



















