ಚಿನ್ನ.. ಚಿನ್ನ.. ಚಿನ್ನ…. ಅಲ್ಲಿ ನಡೆದಿದ್ದು ಚಿನ್ನಕ್ಕಾಗಿ ಸಂಘರ್ಷ! ಅಲ್ಲಿ ತೆಗೆದಿದ್ದು ಟನ್ ಗಟ್ಟಲೆ ಚಿನ್ನ! ಚಿನ್ನದ ಬೇಟೆಗಿಳಿದ ಅದೆಷ್ಟೋ ಮಂದಿ, ಅದೇ ಚಿನ್ನದ ಗಣಿಯಲ್ಲಿ ಜೀವಂತವಾಗಿ ಸಮಾಧಿಯಾಗಿದ್ದಾರೆ!. ಅಂಥಾ ಚಿನ್ನದ ಗಣಿಯಲ್ಲಿ ಈಗ ಮತ್ತೆ ಚಿನ್ನದ ಬೇಟೆ ಶುರುವಾಗುತ್ತಾ..? 23 ವರ್ಷಗಳ ಹಿಂದೆ ನಿಂತು ಹೋಗಿದ್ದ ಚಿನ್ನದ ಗಣಿ ಕೆಲಸ ಮತ್ತೆ ಶುರುವಾಗುತ್ತಾ..? ಹೀಗೊಂದು ಪ್ರಶ್ನೇ ಇದೀಗ ಮತ್ತೆ ಕೋಲಾರದ ಸುತ್ತ ಮುತ್ತ ಗುಲ್ಲೆದ್ದಿದೆ.
ಕೆಜಿಎಫ್. ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದ ಚಿತ್ರ. ಜಗತ್ತಿನಾದ್ಯಂತ ತನ್ನದೇ ಆದ ಛಾಪು ಮೂಡಿಸಿತ್ತು. ಬಾಕ್ಸ್ ಆಫೀಸನ್ನ ಲೂಟಿ ಮಾಡಿತ್ತು. ಕೆಜಿಎಫ್ ಚಿತ್ರದ ಒನ್ ಲೈನ್ ಕಥೆ ಅಂದ್ರೆ ಅದು ಚಿನ್ನದ ಬೇಟೆ. ಕೆಜಿಎಫ್ ಸಿನಿಮಾ ಬರೀ ಸಿನಿಮಾ ವಿಷ್ಯಕ್ಕಾಗಿ ಮಾತ್ರ ಸಂಚಲನ ಮೂಡಿಸಿದ್ದಿಲ್ಲ.. ಸಿನಿಮಾದ ಹೊರತಾಗಿಯೂ ಕೆಜಿಎಫ್ ಅನ್ನೋ ಹೆಸ್ರು ಸಾಕಷ್ಟು ಸದ್ದು ಮಾಡಿತ್ತು.. ಏನಿದು ಕೆಜಿಎಫ್.. ಏನಿದು ಕೆಜಿಎಫ್ ಅಂತ ಜಗತ್ತಿನ ಜನರು ತಡಕಾಡೋದಕ್ಕೆ ಶುರು ಮಾಡಿದ್ದರು. ಆಗಲೇ ಗೊತ್ತಾಗಿದ್ದು.. ಕೆಜಿಎಫ್ ಅಂದ್ರೆ ಬರೀ ಕಾಲ್ಪನಿಕ ಸಿನಿಮಾ ಅಲ್ಲ.. ಕೋಲಾರ ಗೋಲ್ಡ್ ಫೀಲ್ಡ್ನ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಸಿನಿಮಾ ಅಂತ. ಕೆಜಿಎಫ್ ಅನ್ನೋ ಹೆಸ್ರು ಬರೀ ಸಿನಿಮಾಗಷ್ಟೇ ಸೀಮಿತವಾಗಿಲ್ಲ.. ಆದ್ರೆ ಕೆಜಿಎಫ್ ಅನ್ನೋ ಸ್ಥಳದ ಹೆಸರನ್ನ ಸಿನಿಮಾಗೆ ಇಟ್ಟು.. ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲಾಗಿದೆ. ಅಷ್ಟಕ್ಕೂ ಏನಿದು ಕೆಜಿಎಫ್ ಕಥೆ..? ಈಗ್ಯಾಕೆ ಕೆಜಿಎಫ್ ಕಥೆ ಮತ್ತೆ ಸದ್ದು ಮಾಡ್ತಿದೆ ಅಂತ ನೀವ್ ಕೇಳಬಹುದು.. ಖಂಡಿತ ಇದೆ.. ಕೆಜಿಎಫ್ ಅನ್ನೋ ಹೆಸ್ರು ಈಗ ಮತ್ತೊಮ್ಮೆ ಸದ್ದು ಮಾಡ್ತಿರೋದಕ್ಕೂ ಒಂದು ಕಾರಣ ಇದೆ.. ಆ ಕಾರಣವೇ ಕೋಲಾರ ಗೋಲ್ಡ್ ಫೀಲ್ಡ್ ನಲ್ಲಿ ಶುರುವಾಗಿರೋ ಕಾರ್ಯಗಳು.

ಯಸ್, ಒಂದು ಕಾಲದಲ್ಲಿ ನಿಂತು ಹೋಗಿದ್ದ ಕೋಲಾರದ ಚಿನ್ನದ ಗಣಿಯ ಕೆಲಸಗಳು.. ಮತ್ತೆ ಶುರುವಾಗಲಿವೆ. 23 ವರ್ಷಗಳ ಹಿಂದೆ ಕೋಲಾರದಲ್ಲಿ ನಿಂತಿ ಹೋಗಿದ್ದ ಚಿನ್ನದ ಗಣಿ ಕಾರ್ಯ, ಈಗ ಮತ್ತೆ ಶುರುವಾಗುತ್ತೆ ಅಂತ ಹೇಳಲಾಗ್ತಿದೆ. ನೂರಾರು ಟನ್ನುಗಳಷ್ಟು ಚಿನ್ನವನ್ನು ಬ್ರಿಟೀಷರು ಇದೇ ನೆಲವನ್ನು ಅಗೆದು, ಬಗೆದು, ಹೊತ್ತೊಯ್ದಿದ್ದರು. ಅದೇ ನೆಲದಲ್ಲಿ ಈಗ ಮತ್ತೆ ಚಿನ್ನದ ಬೇಟೆ ಶುರುವಾಗ್ತಿದೆ. 2001ರಲ್ಲಿ ಬಂದ್ ಆಗಿದ್ದ ಗಣಿಯನ್ನ, ಈಗ ಸರ್ಕಾರವೇ ರೀ ಸ್ಟಾರ್ಟ್ ಮಾಡುತ್ತಿದ್ದು, . ಮತ್ತೆ ಕೆಜಿಎಫ್ ನ ಚಿನ್ನದ ಪುಟಗಳು ಓಪನ್ ಆಗೋ ಸಾಧ್ಯತೆಗಳು ಗೋಚರಿಸುತ್ತಿವೆ.

ಆದ್ರೆ, ಕೆಜಿಎಫ್ ನಲ್ಲಿ ನಿಜಕ್ಕೂ 30 ಲಕ್ಷ ಟನ್ ಬಂಗಾರ ಇನ್ನೂ ಇದ್ಯಾ..? 30 ಲಕ್ಷ ಕೋಟಿಯಷ್ಟು ಬಂಗಾರವನ್ನು ತೆಗೆದರೆ, ಭಾರತದ ಭವಿಷ್ಯವೇ ಬದಲಾಗಲಿದೆ ಅಂತ ಹೇಳಲಾಗ್ತಿದೆ. ಹಂಗಾಗಿ ಈಗ ಕೋಲಾರದ ಮಣ್ಣಲ್ಲಿರೋ ಚಿನ್ನವನ್ನ ಹೊರ ತೆಗೆಯೋದಕ್ಕೆ.. ಟೀಂ ರೆಡಿಯಾಗ್ತಿದೆ.. ಸರ್ಕಾರ ಕೂಡ ಕೆಜಿಎಫ್ ನಲ್ಲಿ ಗೋಲ್ಡ್ ಮೈನಿಂಗ್ ಗೆ ಓಕೆ ಅಂದಿದೆ.. ಹಂಗಾಗಿ ಈಗ ಕೋಲಾರದ ಮಣ್ಣು ಅಕ್ಷರಶಃ ಚಿನ್ನಬವಾಗಿ ಬದಲಾಗಿಬಿಟ್ಟಿದೆ. ಕೆಜಿಎಫ್ ಗೋಲ್ಡ್ ಫೀಲ್ಡ್ ಅಂದ್ರೆ ಸಣ್ಣ ಪ್ರಮಾಣದ್ದಲ್ಲ.. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ, ಚಿನ್ನದ ಗಣಿಯೇ ಕಣ್ಣಿಗೆ ಕಾಣಿಸುತ್ತೆ.

ಅಸಲಿಗೆ, ಈ ಕೆಜಿಎಫ್ನಲ್ಲಿ ಚಿನ್ನದ ಗಣಿಗಾರಿಕೆ ಶುರುವಾಗ್ತಿರೋದು ಒಂದ್ ರೀತಿಯಲ್ಲಿ ಖುಷಿ ವಿಚಾರ ಆದ್ರೆ, ಮತ್ತೊಂದು ಲೆಕ್ಕದಲ್ಲಿ, ಇದು ಸಂಕಷ್ಟಗಳನ್ನು ತಂದೊಡ್ಡೋ ಸಾಧ್ಯತೆ ಇದೆ.. ಸೈನೆಡ್ ಗುಡ್ಡ 150 ವರ್ಷಗಳಿಂದ ಸೈಲೆಂಟಾಗಿ ಕುಂತಿದೆ. ಅದನ್ನ ಮುಟ್ಟೋದಕ್ಕೆ ಹೋದ್ರೆ, ಅದರಲ್ಲಿರೋ ವಿಷಕಾರಿ ಅಂಶ ಸುತ್ತಮುತ್ತಲಿನ ಜನರ ದೇಹ ಸೇರಿ, ಜೀವಕ್ಕೆ ಕುತ್ತು ತರುವಂಥಾ ಸಾಧ್ಯತೆ ಇದೆ. ಇಷ್ಟೇ ಅಲ್ಲ.. ಚಿನ್ನದ ಗಣಿಗಾರಿಕೆಗೆ ಮತ್ತು ಸೈನೆಡ್ ಗುಡ್ಡದ ಕಾರ್ಯಾಚರಣೆಗೆ ಅಪಾರ ಪ್ರಮಾಣಧ ನೀರು ಬೇಕಾಗುತ್ತೆ.. ಅದನ್ನ ತರೋದು ಎಲ್ಲಿಂದ..? ಶುದ್ಧೀಕರಣ ಮಾಡೋದು ಹೇಗೆ..? ಇಂಥಾ ಹತ್ತಾರು ಪ್ರಶ್ನೆಗಳು ಕಾಡುತ್ತಿದೆ. ಇದರ ಜೊತೆಗೆ ಮುಂದೆ ಏನಾದ್ರೂ ಸುತ್ತಮುತ್ತಲಿನ ಜನರಿಗೆ ಆರೋಗ್ಯ ಸಮಸ್ಯೆಗಳು ಎದುರಾದರೆ ಯಾರು ಹೊಣೆ? ಅನ್ನೋ ಆತಂಕವೂ ಕಾಡುತ್ತಿದೆ.