ಕೋಲಾರ : ಬೆಳಗ್ಗೆ ಟೀ ಮಾಡಲು ಗ್ಯಾಸ್ ಹಚ್ಚಿದ ವೇಳೆ ಸಿಲಿಂಡರ್ ಸ್ಪೋಟಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀಪುರ ಗ್ರಾಮದ ರಿಹಾನ ಎಂಬುವರ ಮನೆಯಲ್ಲಿ ದುರಂತ ಸಂಭವಿಸಿದೆ. ರಿಹಾನಾಳಿಗೆ ಗಾಯಗಳಾಗಿದ್ದು, ಸ್ಥಳೀಯ ಲಕ್ಷ್ಮೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ ದಾವಿಸಿ ಬೆಂಕಿ ನಂದಿಸಿದೆ. ಘಟನೆಯಿಂದ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.
ಇದನ್ನೂ ಓದಿ : ಹಣ, ಕಾಮ, ಕೊಲೆ: 1 ಕೋಟಿ ರೂಪಾಯಿ ವಿಮೆಗಾಗಿ, ಪ್ರಿಯಕರನೊಂದಿಗೆ ಸೇರಿ ಮಗನನ್ನೇ ಕೊಂದ ತಾಯಿ!



















