ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆಎಲ್ ರಾಹುಲ್ ಹಾಗೂ ಪತ್ನಿ ಆತಿಯಾ ಶೆಟ್ಟಿ ‘ಕ್ರಿಕೆಟ್ ಫಾರ್ ಚಾರಿಟಿ’ ಹರಾಜು ಹಮ್ಮಿಕೊಂಡಿದ್ದರು.ವಿಪ್ಲಾ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ನಡೆದಿತ್ತು.
ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿಯ ಜೆರ್ಸಿ ಬರೋಬ್ಬರಿ 40 ಲಕ್ಷ ರೂ.ಗೆ ಮಾರಾಟವಾಗಿದೆ. ರೋಹಿತ್ ಶರ್ಮಾ ಅವರ ಬ್ಯಾಟ್ 24 ಲಕ್ಷ ರೂ., ಧೋನಿ ಬ್ಯಾಟ್ 13 ಲಕ್ಷ ರೂ.,ಗೆ ಹರಾಜಾಗಿದೆ. ವಿರಾಟ್ ಕೊಹ್ಲಿಯ ನಂಬರ್ 18 ಜೆರ್ಸಿಯನ್ನು ಹರಾಜಿಗಿಡಲಾಗಿತ್ತು. ಈ ಜೆರ್ಸಿಯು ಬರೋಬ್ಬರಿ 40 ಲಕ್ಷ ರೂ.ಗೆ ಮಾರಾಟವಾಗಿದೆ. ಕೊಹ್ಲಿ ಗ್ಲೌಸ್ ಕೂಡ 28 ಲಕ್ಷ ರೂ.ಗೆ ಮಾರಾಟವಾಗಿದೆ.
ರೋಹಿತ್ ಶರ್ಮಾ ಬಳಸುತ್ತಿದ್ದ ಬ್ಯಾಟ್ 24 ಲಕ್ಷ ರೂ.ಗೆ ಮಾರಾಟವಾಗಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟ್ 13 ಲಕ್ಷ ರೂಪಾಯಿಗಳಿಗೆ ಬಿಕರಿಯಾಗಿದೆ. ಕ್ರಿಕೆಟ್ ಲೆಜೆಂಡ್ ರಾಹುಲ್ ದ್ರಾವಿಡ್ ಬ್ಯಾಟ್ ಬರೋಬ್ಬರಿ 11 ಲಕ್ಷ ರೂ.ಗೆ ಮಾರಾಟವಾಗಿದೆ. ಕೆ.ಎಲ್. ರಾಹುಲ್ ಜೆರ್ಸಿ 11 ಲಕ್ಷ ರೂ.ಗೆ ಬಿಕರಿಯಾಗಿದೆ. ಜಸ್ ಪ್ರೀತ್ ಬುಮ್ರಾ ಸಹಿ ಹಾಕಿರುವ ಜೆರ್ಸಿಯು 8 ಲಕ್ಷ ರೂ.ಗೆ ಹರಾಜಾಗಿದೆ.
ಇದಲ್ಲದೇ, ಕೆ.ಎಲ್. ರಾಹುಲ್ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್, ಇಂಡಿಯಾ ಜೆರ್ಸಿ, ಟೀಮ್ ಇಂಡಿಯಾ ಕ್ಯಾಪ್, ಬ್ಯಾಟಿಂಗ್ ಪ್ಯಾಡ್‌ಗಳು, ಟೀಮ್ ಇಂಡಿಯಾ ಹೆಲ್ಮೆಟ್, ಬ್ಯಾಟಿಂಗ್ ಗ್ಲೌಸ್ ಮತ್ತು ಟೆಸ್ಟ್ ಜೆರ್ಸಿಯು ಒಟ್ಟು 32.20 ಲಕ್ಷ ರೂ.ಗೆ ಹರಾಜಾಗಿವೆ. ಈ ಹರಾಜು ದುಡ್ಡನ್ನು ಈ ದಂಪತಿ ಅವಕಾಶ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಹಣ ಹೊಂದಿಸಿದ್ದಾರೆ. ಒಟ್ಟು 1.93 ಕೋಟಿ ರೂ. ಹಣ ಸಂಗ್ರಹವಾಗಿದ್ದು, ವಿದ್ಯಾರ್ಥಿಗಳಿಗಾಗಿ ಈ ಹಣ ವಿನಿಯೋಗವಾಗಲಿದೆ.