ಬೆಂಗಳೂರು: ನಗರದ ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ ಮಾಡಲಾಗಿದೆ.
ಒಟ್ಟು 167 ಒತ್ತುವರಿದಾರರ ಪೈಕಿ ಕೇವಲ 26 ಜನರು ಮಾತ್ರ ಮನೆ ಪಡೆಯಲು ಅರ್ಹರು ಎಂದು ಅಂತಿಮ ವರದಯಲ್ಲಿ ಉಲ್ಲೇಖಿಸಲಾಗಿದೆ. ಈ 26 ಜನರ ಹಿನ್ನೆಲೆಯನ್ನೂ ಪೊಲೀಸರು ಕೂಲಂಕುಷವಾಗಿ ಪರಿಶೀಲಿಸಿ , ಅವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಮೂಲ ಸ್ಥಳದ ಬಗ್ಗೆ ಸಂಪೂರ್ಣ ತನಿಖೆ ಮಾಡಿದ್ದಾರೆ.
ಪೊಲೀಸ್ ವೆರಿಫಿಕೇಷನ್ ಮುಕ್ತಾಯವಾದ ಬಳಿಕ ಪೊಲೀಸ್ ಇಲಾಖೆಯಿಂದ ಡಿಸಿಗೆ ಅಂತಿಮ ವರದಿ ಸಲ್ಲಿಕೆಯಾಗಿದ್ದು, ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಸತಿ ಇಲಾಖೆಗೆ ವರದಿ ಸಲ್ಲಿಕೆ ಮಾಡಿದೆ.
ಪರಿಶೀಲನೆ ವೇಳೆ ಹಳೇ ಪಕೀರ್ ಕಾಲೋನಿಯಲ್ಲಿ ಒಬ್ಬರದ್ದು ದಾಖಲೆಗಳು ಇಲ್ಲ ಎನ್ನುವುದು ಬಹಿರಂಗವಾಗಿದೆ. ಇದೀಗಾ 26 ಜನರಿಗೆ ಅಷ್ಟೇ ಮನೆ ಸಿಗುವುದು ಅಂತಿಮವಾಗಿದ್ದು, ಉಳಿದವರದವರಿಗೆ ಮನೆ ಭಾಗ್ಯ ಸಿಗುವುದು ಖಚಿತವಾಗಿಲ್ಲ ಎಂದು ತಿಳಿದು ಬಂದಿದೆ.
ಯಾವ ರೀತಿಯಲ್ಲಿ ಪರಿಶೀಲನೆ?
- ಮನೆಗೆ ಬಂದು ಅರ್ಜಿಗೆ ಸಹಿ ಮಾಡಿಸಿಕೊಂಡ ಅಧಿಕಾರಿಗಳು
- ಮನೆಯ ಮುಂದೆ ನಿಲ್ಲಿಸಿ ಫೋಟೋ ಕ್ಲಿಕ್
- ವಾಸಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಕೆ
- ಅರ್ಜಿ ಸಲ್ಲಿಸಿರುವುದಕ್ಕೆ ಮೇಸೆಜ್ ಮೂಲಕ ಕನ್ಫರ್ಮೇಷನ್
- ಕೋಗಿಲು ಲೇಔಟ್ ಗೆ ಬರೋ ಮುಂಚೆ ಎಲ್ಲಿ ವಾಸವಾಗಿದ್ರು ಅನ್ನೋ ಖಚಿತ ಮಾಹಿತಿ
- ಆ ಮನೆಯ ಬಳಿ ಕರೆದುಕೊಂಡು ಹೋಗಿ ನಿವಾಸಿಗಳಿಂದ ಸಾಕ್ಷಿ
- ಸಾಕ್ಷಿ ಸಹಿ ಮಾಡಿಸಿಕೊಂಡಿರೋ ಅಧಿಕಾರಿಗಳು
- ಪೋಲಿಸ್ ಅಧಿಕಾರಿಗಳಿಂದ ಎಲ್ಲಾ ದಾಖಲಾತಿಗಳ ಪರಿಶೀಲನೆ
- ಅರ್ಹರಿಗೆ ಈಗಾಗಲೇ ಜಿಬಿಎ ಅಧಿಕಾರಿಗಳಿಂದ ಮೆಸೇಜ್
ಇದನ್ನೂ ಓದಿ: ಧರ್ಮಸ್ಥಳ 74 ಅಸಹಜ ಸಾವು ಪ್ರಕರಣ | ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ



















