ಬೆಂಗಳೂರು : ಕೆಎಂಎಫ್‌ನ ನಂದಿನಿ ತುಪ್ಪ ಕಲಬೆರಕೆ ಪ್ರಕರಣ ಸಂಬಂಧಪಟ್ಟಂತೆ ಸಿಸಿಬಿ ಪೋಲಿಸರು ಕಿಂಗ್ ಪಿನ್ ದಂಪತಿಯನ್ನು ಬಂಧಿಸಿದ್ದಾರೆ.
ಶಿವಕುಮಾರ್ ಹಾಗೂ ರಮ್ಯಾ ಬಂಧಿತ ಆರೋಪಿಗಳು. ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ದಂಪತಿ ಹೊಂದಿದ್ದರು. ಸಿಸಿಬಿ ಪೋಲಿಸರ ದಾಳಿಯಿಂದ ತುಪ್ಪ ತಯಾರಿಸುವ ಹೈಟೆಕ್ ಮೆಷಿನರಿ ಪತ್ತೆಯಾಗಿವೆ.
ಈ ಹಿಂದೆ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಆತನ ಮಗ ದೀಪಕ್, ಮುನಿರಾಜು ಎಂಬುವರನ್ನ ಪೋಲಿಸರು ಬಂಧಿಸಿದರು. ಅತ್ಯಾಧುನಿಕ ದೊಡ್ಡ ದೊಡ್ಡ ಯಂತ್ರಗ ಳನ್ನ ಬಳಸಿಕೊಂಡು ನಂದಿನಿ ಪ್ರಾಡಕ್ಟ್ ಗಳನ್ನ ತಯಾರಿಸುತ್ತಿದ್ದು, ಸದ್ಯ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಇವಿ ಬಸ್ ಚಲಿಸುವಾಗ ಮೊಬೈಲ್ ಬಳಸುವುದು ನಿಷೇಧ | ಬಿಎಂಟಿಸಿ ಆದೇಶ



















