ಬೆಂಗಳೂರು : ಕಾಂತಾರ ಚಾಪ್ಟರ್ 1 ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಕೂಡಾ ಸಿನಿಮಾ ನೋಡಿ ರಿಯಾಕ್ಟ್ ಮಾಡುತ್ತಿದ್ದಾರೆ.
ಹೀಗಿರುವಾಗಲೇ ಮಂಗಳೂರು ಹುಡುಗ, ಭಾರತ ಕ್ರಿಕೆಡ್ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಅವರು ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾಂತಾರ 1 ಬಗ್ಗೆ ಬರೆದುಕೊಂಡಿದ್ದಾರೆ.

‘ಕಾಂತಾರವನ್ನು ಈಗಷ್ಟೇ ನೋಡಿದೆ. ರಿಷಬ್ ಶೆಟ್ಟಿ ಸೃಷ್ಟಿಸಿರುವ ಈ ಮ್ಯಾಜಿಕ್ಗೆ ತಲೆಬಾಗುತ್ತೇನೆ. ಮಂಗಳೂರಿನ ಜನರು, ಮನಸ್ಸು ಎಲ್ಲವನ್ನೂ ತುಂಬಾ ಸುಂದರವಾಗಿ ಪ್ರಸ್ತುತಪಡಿಸಿದ್ದೀರಿ’ ಎಂದು ಅವರು ಬರೆದಿದ್ದಾರೆ.
ಇತ್ತೀಚೆಗೆ ಬಿಜೆಪಿ ಮುಖಂಡ ಅಣ್ಣಾಮಲೈ ಕೂಡಾ ಸಿನಿಮಾ ನೋಡಿ ರಿಯಾಕ್ಟ್ ಮಾಡಿದ್ದರು. ಟ್ವಿಟರ್ನಲ್ಲಿ ಸಿನಿಮಾ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಅಣ್ಣಾಮಲೈ, “ನಂಬಿಕೆ ಮತ್ತು ಜಾನಪದದ ವಿಶೇಷ ಮಿಶ್ರಣವಾದ ಕಾಂತಾರ ಅಧ್ಯಾಯ 1 ಅನ್ನು ವೀಕ್ಷಿಸಿದೆ. ರಿಷಬ್ ಶೆಟ್ಟಿ ಅವರು ನಿರ್ದೇಶಕ ಮತ್ತು ನಾಯಕ ನಟರಾಗಿ ಅದ್ಭುತ ಅಭಿನಯವನ್ನು ನೀಡಿದ್ದಾರೆ ಎಂದು ಹೇಳಿದ್ದರು.
KL Rahul praised Kantara movie