ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ತೋರಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಆಕರ್ಷಕ ಅರ್ಧ ಶತಕ ಗಳಿಸಿದ್ದಾರೆ. ಪಾಟಿದಾರ್ ಆಟ ಕಂಡು ಅಭಿಮಾನಿಗಳು ಸೇರಿದಂತೆ ಕಿಂಗ್ ಕೊಹ್ಲಿ ಕೂಡ ದಂಗಾಗಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಆರ್ ಸಿಬಿ 221 ರನ್ ಗಳಿಸಿದೆ. ನಾಯಕ ರಜತ್ ಪಾಟಿದರ್, ಮುಂಬೈ ಬೌಲರ್ಗಳ ಬೆವರಿಳಿಸಿ ಸ್ಫೋಟಕ ಅರ್ಧಶತಕ ಸಿಡಿಸಿದರು. ಪಾಟಿದಾರ್ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 64 ರನ್ ಕಲೆಹಾಕಿದರು. ಜಿತೇಶ್ ಶರ್ಮಾ ಅವರೊಂದಿಗೆ ಅರ್ಧಶತಕದ ಜೊತೆಯಾಟ ನೀಡಿದರು. ಈ ಮೂಲಕ ಬೌಲ್ಟ್ ಹಾಗೂ ಹಾರ್ದಿಕ್ ಪಾಂಡ್ಯ ವಿರುದ್ಧ ಬೌಂಡರಿಗಳ ಮಳೆಗರೆದ ಈ ಇಬ್ಬರು ತಂಡವನ್ನು 200 ರನ್ಗಳ ಗಡಿ ದಾಟಿಸಿದರು. ಈ ವೇಳೆ ಪಾಟಿದಾರ್ ಆಟ ಕಂಡು ಕಿಂಗ್ ಕೂಡ ದಂಗಾಗಿ ಹೋಗಿದ್ದಾರೆ.