ಬೆಂಗಳೂರು :ರಾಜಧಾನಿಯಲ್ಲಿ ಹಣಕಾಸಿನ ವಿಚಾರಕ್ಕಾಗಿ ಒರ್ವ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ವಿಕೃತಿವೆಸಗಿದ್ದಾರೆ. ಬಳಿಕ ಮರ್ಮಾಂಗಕ್ಕೆ ಸಿಗರೇಟ್‌ನಿಂದ ಸುಟ್ಟು, ಇಂಜೆಕ್ಷನ್ ಚುಚ್ಚಿ ಚಿತ್ರಹಿಂಸೆ ನೀಡಿದ್ದಾರೆ.
ಸಗಾಯ್ ರಾಜ್ ಎಂಬಾತನಿಗೆ ಆರೋಪಿಗಳು ಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಜೋರಾಗಿ ಕೂಗಿದ್ದರಿಂದ ಸ್ಥಳಿಯರು ಆತನನ್ನು ಬಚಾವ್ ಮಾಡಿದ್ದಾರೆ.
ಈ ಹಿಂದೆ ಆನಂದ್ ಕುಮಾರ್ ತನ್ನ ತಂದೆಗೆ ಕಿಡ್ನಿ ಫೆಲ್ಯೂರ್ ಎಂದಿದ್ದಕ್ಕೆ ಸಗಾಯ್ ರಾಜ್ ಹಣ ನೀಡಿದ್ದನು. ಆತನ ಮಗಳು ಐಶ್ವರ್ಯ ಅಕೌಂಟ್‌ಗೆ ಹಂತ ಹಂತವಾಗಿ 3 ಲಕ್ಷದವರೆಗೂ ಹಣ ಹಾಕಿದ್ದನಂತೆ. ಅಗ್ರಿಮೆಂಟ್‌ಗೆ ಮುನ್ನ ಒಂದು ಕೋಟಿ ನೀಡಬೇಕು ನಂತರ ಉಳಿದ ಅಮೌಂಟ್ ಎಂದು ಮಾತುಕತೆಯಾಗಿತ್ತು ಅಂತೆಯೇ ಸಗಾಯ್ ಒಂದು ಕೋಟಿ ಹಣ ನೀಡಿದ್ದು ನಂತರ 3 ಲಕ್ಷ ಕೊಟ್ಟಿದ್ದಾರೆ. ಇದೀಗ ಹಣ ವಾಪಸ್ ಕೇಳಿದ್ದಕ್ಕೆ, ಕಾರಿನಲ್ಲಿ ಹೋಗುವಾಗ ಕಿಡ್ನಾಪ್ ಮಾಡಿದ್ದಾರೆ.
ಬೈಕ್‌ನಲ್ಲಿ ಬಂದ ಅಪರಿಚಿತರು ಸಗಾಯ್ ಮುಖಕ್ಕೆ ಬಟ್ಟೆ ಕಟ್ಟಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೈಕಾಲು ಕಟ್ಟಿ ಹಾಕಿ ಮರ್ಮಾಂಗಕ್ಕೆ ಮತ್ತು ತೊಡೆಗಳಿಗೆ ಸಿಗರೇಟ್‌ನಿಂದ ಚುಚ್ಚಿ ಹಿಂಸೆ ನೀಡಿದ್ದಾರೆ. ನಂತರ ಅದನ್ನ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದರಂತೆ. ಬಳಿಕ ರಾತ್ರಿವಿಡೀ ಕಾರಿನಲ್ಲಿ ಸುತ್ತಾಡಿಸಿ ಬೆಳಗಿನ ಜಾವ ಟ್ರಾಫಿಕ್ ವೇಳೆ ಕೂಗಾಡಿದ್ದರಿಂದ ಸಾರ್ವಜನಿಕರು ಸಗಾಯ್‌ನನ್ನ ಬಚಾವ್ ಮಾಡಿದ್ದಾರೆ.
ಬಳಿಕ ಟ್ರಾಫಿಕ್ ಪೊಲೀಸರ ಮೂಲಕ ದೂರುದಾರ ಪೊಲೀಸರನ್ನ ಸಂಪರ್ಕ ಮಾಡಿದ್ದಾರೆ. ಸದ್ಯ ಐಶ್ವರ್ಯ, ಆಶೀಶ್, ಆನಂದ್ ಸೇರಿದಂತೆ ಹಲವರ ಮೇಲೆ ಕೇಸ್ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.