ರಾಯಚೂರು: ರಾಯಚೂರು ಹಾಗೂ ಮಹಾರಾಷ್ಟ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಅಪಹರಣಕಾರರನ್ನು ಬಂಧಿಸಿ, ನಾಲ್ವರನ್ನು ರಕ್ಷಿಸಿದ್ದಾರೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದ ಮನೆಯೊಂದರಲ್ಲಿ ಯುವಕರನ್ನು ಕೂಡಿಟ್ಟಿದ್ದ ಆರೋಪಿಗಳಾದ ರಾಮು ಹಾಗೂ ದತ್ತು ಎಂಬುವವರನ್ನು ಪೊಲೀಸರು ವಶಕ್ಕೆ ಪೆಡಿದ್ದಾರೆ. ಅಲ್ಲದೇ, ಸ್ವಪಲ್(23),ಶೂಬಮ್(22),ಗಜಾನನ(22) ಹಾಗೂ ಓಕಾಂರ(20) ಎಂಬ ಯುವಕರನ್ನು ಪೊಲೀಸರು ರಕ್ಷಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಿಂದ ಏಳು ಜನ ಯುವಕರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡ, ನಂತರ ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದ ಮನೆಯಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳಿದ್ದ ಜಾಗ ಪತ್ತೆ ಮಾಡಿದ್ದಾರೆ. ಪೊಲೀಸರ ದಾಳಿ ವೇಳೆ ಗನ್ ತೋರಿಸಿ ಮೂವರು ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


















