ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಹಾಗೂ ಎಐಸಿಸಿ ನಾಯಕರ ಮಧ್ಯೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಜಟಾಪಟಿ ನಡೆದಿದೆ. ಜಮೀರ್ ಮಾತಿಗೆ, ಕೋಪಕ್ಕೆ ಯಾವುದೇ ಸೊಪ್ಪು ಹಾಕದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಮ್ಮ ಆಪ್ತರಿಗೆ ಪಟ್ಟ ಕಟ್ಟಿದ್ದಾರೆ.
ಈ ದಂಗಲ್ ಗೆ ಸಿಎಂ ಕೂಡ ಎಂಟ್ರಿ ಕೊಟ್ಟಿದ್ದರು. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನವನ್ನು ಆಪ್ತ ಅನ್ವರ್ ಪಾಷಾಗೆ ನೀಡಲು ಜಮೀರ್ ಮುಂದಾಗಿದ್ದರು. ಆದರೆ, ಸಯದ್ ಉಲ್ ಹುಸೇನಿ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ, ನಾಸೀರ್ ಹುಸೇನ್ ಬ್ಯಾಟಿಂಗ್ ನಡೆಸಿದ್ದರು. ಹೀಗಾಗಿ ಭಿನ್ನಮತ ಸೃಷ್ಟಿಯಾಗಿತ್ತು.
ತಮ್ಮ ಆಪ್ತರಿಗೆ ಅವಕಾಶ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಜಮೀರ್ ಅಹ್ಮದ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆದರೆ, ಜಮೀರ್ ಬೆದರಿಕೆಗೆ ಡೋಂಟ್ ಕೇರ್ ಎಂದ, ಹೈಕಮಾಂಡ್ ಮಾತ್ರ ಸಯದ್ ಉಲ್ ಹುಸೇನಿ ಅವರನ್ನು ಆಯ್ಕೆ ಮಾಡಿದೆ.