‘ಕೆಜಿಎಫ್’ ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ಅವರು ನಿಖಿತಾ ಜೊತೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭುವನ್ ಗೌಡ ದಂಪತಿಗೆ ನಟ ರಾಕಿಂಗ್ ಸ್ಟಾರ್ ಯಶ್ ಶುಭ ಹಾರೈಸಿದ್ದಾರೆ.
ಇಂದು ಬೆಂಗಳೂರಿನ ಜಾಲಹಳ್ಳಿ ರಸ್ತೆಯ ಪ್ರೈವೇಟ್ ರೆಸಾರ್ಟ್ನಲ್ಲಿ ʼಕೆಜಿಎಫ್ʼ ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ಸಪ್ತಪದಿ ತುಳಿದಿದ್ದು, ಈ ಮದುವೆ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಟಿ ಶ್ರೀಲೀಲಾ ಸೇರಿದಂತೆ ಹಲವು ಸಿನಿಮಾ ತಾರೆಯರು ಭಾಗಿಯಾಗಿದ್ದರು.
KGF ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ಈಗ ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ನಿರ್ಮಾಪಕರೂ ಆಗಿದ್ದಾರೆ. ಫೋಟೊಗ್ರಾಪರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 2014ರಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ, ಶ್ರೀಮುರಳಿ ನಟನೆಯ ʼಉಗ್ರಂʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.
ಇನ್ನು 2018ರಲ್ಲಿ ಬಿಡುಗಡೆಯಾದ ʼಕೆಜಿಎಫ್: ಚಾಪ್ಟರ್ 1ʼ ಮತ್ತು 2022ರಲ್ಲಿ ರಿಲೀಸ್ ಆದ ʼಕೆಜಿಎಫ್ ಚಾಪ್ಟರ್ 2′ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಇವರು, ಎಲ್ಲಡೆ ಮನೆಮಾತಾಗಿದ್ದಾರೆ.



















