ಮಂಡ್ಯ: ಕೀಚಕ ಸಹೋದರನೊಬ್ಬ ಒಡಹುಟ್ಟಿದವನ ಕೊಲೆಗೆ ಸುಪಾರಿ ನೀಡಿ, ಪಾಪ ಕಳೆದುಕೊಳ್ಳಲು ಹಾಗೂ ಪೊಲೀಸರ ದಿಕ್ಕು ತಪ್ಪಿಸಲು ಪ್ರಯಾಗ್‌ರಾಜ್‌ಗೆ ಹೋಗಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು (Mandya Police) ಅತಿಥಿಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು (Maddur) ತಾಲೂಕಿನ ಲಕ್ಷ್ಮೇಗೌಡನದೊಡ್ಡಿಯ ಎಲ್.ಕೃಷ್ಣೇಗೌಡ ಎಂಬಾತನನ್ನು ಫೆ. 11ರಂದು ಬೆಳ್ಳಂಬೆಳಗ್ಗೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದರಿಂದ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದರು. ಇತ್ತ ಕೃಷ್ಣೇಗೌಡ ಪತ್ನಿ ಹಾಗೂ ಸಂಭಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಬೆಳಗ್ಗೆ 6 ಗಂಟೆ ವೇಳೆಗೆ ಜಮೀನಿಗೆ ಕೃಷ್ಣೇಗೌಡ ಎಮ್ಮೆ ಕಟ್ಟಿ ಹಾಕಲು ಹೋದಾಗ 6 ಜನರ ಗುಂಪು ಕೃಷ್ಣೇಗೌಡನನ್ನು ಕೊಲೆ ಮಾಡಿ ಪಾರಾರಿಯಾಗಿತ್ತು. ಸ್ಥಳಕ್ಕೆ ಬಂದ ಕೆ.ಎಂ ದೊಡ್ಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪೊಲೀಸರಿಗೆ ಮೊದಲು ಅನುಮಾನ ಬಂದಿದ್ದೆ ಕೊಲೆಯಾದ ಕೃಷ್ಣೇಗೌಡನ ಅಣ್ಣ ಶಿವನಂಜೇಗೌಡ ಉರ್ಪ್ ಗುಡ್ಡಪ್ಪನ ಮೇಲೆ. ಕೊಲೆಯಾದ ಸಂದರ್ಭದಲ್ಲಿ ಹಾಗೂ ಮೃತ ದೇಹದ ಅಂತ್ಯಸಂಸ್ಕಾರದ ವೇಳೆ ಶಿವನಂಜೇಗೌಡ ಸ್ಥಳದಲ್ಲಿ ಇರಲಿಲ್ಲ. ಆನಂತರ ವಿಚಾರಣೆ ನಡೆಸಿದಾಗ ಆತ ಪ್ರಯಾಗ್‌ರಾಜ್‌ನ ಕುಂಭಮೇಳಕ್ಕೆ ಹೋಗಿದ್ದ ಎಂದು ತಿಳಿದು ಬಂದಿತ್ತು. ಯಾವಾಗ ಬರುತ್ತಿಯಾ? ಎಂದು ಕೇಲಿದಾಗ ಫ್ಲೈಟ್ ಮಿಸ್ ಆಗಿದೆ ಎಂದಿದ್ದಾನೆ.
ಆನಂತರ ಪೊಲೀಸರು ತಮ್ಮ ಭಾಷೆಯಲ್ಲಿ ಮಾತನಾಡಿಸಿದಾಗ ಸತ್ಯ ಹೊರ ಬಿದ್ದಿದೆ. ಶಿವನಂಜೇಗೌಡ, ಕೃಷ್ಣೇಗೌಡ ಮಾಡಿದ ಸಾಲ ತೀರಿಸಿದ್ದು, ಕೃಷ್ಣೇಗೌಡನ ಜಮೀನನ್ನು ಸಾಲದ ಬದಲಿಗೆ ಗುಡ್ಡಪ್ಪಗೆ ಕೊಡುವುದಾಗಿ ಒಪ್ಪಂದ ಆಗಿತ್ತಂತೆ. ಆದರೆ, ಕೃಷ್ಣೇಗೌಡ ಜಮೀನು ನೀಡಲು ನೀರಾಕರಿಸದ ಕಾರಣ ಕೃಷ್ಣೇಗೌಡ ತಮ್ಮನನ್ನು ಕೊಲೆ ಮಾಡಲು ಸಪಾರಿ ನೀಡಿದ್ದು, ಮೂರು ತಿಂಗಳಿನಿಂದ ಕೊಲೆ ತಾನೇ ಸ್ಕೇಚ್ ಹಾಕಿದ್ದಾನೆ. ಕೊಲೆಯ ದಿನಾಂಕ ನಿಗದಿ ಆಗುತ್ತಿದ್ದಂತೆ ಪೊಲೀಸರನ್ನು ಯಾಮಾರಿಸಲು ಹಾಗೂ ಒಡಹುಟ್ಟಿದವನ ಸಾವಿಗೆ ಕಾರಣ ಆಗಿರುವ ಪಾಪ ತೊಳೆದುಕೊಳ್ಳಲು ಪ್ರಯಾಗ್‌ರಾಜ್ ಗೆ ಹೋಗಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವನಂಜೇಗೌಡ, ಚಂದ್ರಶೇಖರ್, ಸುನೀಲ್, ಉಲ್ಲಾಸ್‌ಗೌಡ, ಪ್ರತಾಪ್, ಅಭಿಷೇಕ್, ಶ್ರೀನಿವಾಸ್, ಹನುಮೇಗೌಡರನ್ನು ಕೆ.ಎಂ.ದೊಡ್ಡಿ ಎಂಬುವವರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.