ಮುಂಬೈ: ಕನ್ನಡ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟು, ಕನ್ನಡದ ಜತೆಗೆ ತೆಲುಗು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶ್ರೀಲೀಲಾ (Actor Sreeleela) ಅವರೀಗ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಕಾರ್ತಿಕ್ ಆರ್ಯನ್ ನಟಿಸಿರುವ ಆಶಿಕಿ 3 (Aashiqui 3) ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದು, ಚಿತ್ರದ ಟೀಸರ್ ಈಗ ಔಟ್ ಆಗಿದೆ.
ಕನ್ನಡ ಹಾಗೂ ತೆಲುಗು ಸಿನಿಮಾಗಳ ಮೂಲಕ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಶ್ರೀಲೀಲಾ ಅವರೀಗ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಆಶಿಕಿ 3 ಸಿನಿಮಾ ಮೂಲಕ ಅವರು ಬಾಲಿವುಡ್ ಪ್ರವೇಶಿಸಿದ್ದು, ಕಾರ್ತಿಕ್ ಆರ್ಯನ್ ಜತೆ ರೊಮ್ಯಾನ್ಸ್ ಮಾಡಿದ್ದಾರೆ. ಆಶಿಕಿ 3 ಸಿನಿಮಾದ ಟೀಸರ್ ಔಟ್ ಆಗಿದ್ದು, ಕಾರ್ತಿಕ್ ಜತೆ ಶ್ರೀಲೀಲಾ ಮೈಚಳಿ ಬಿಟ್ಟು ರೊಮ್ಯಾನ್ಸ್ ಮಾಡಿದ್ದಾರೆ.
This Diwali ❤️🔥@basuanurag @sreeleela14 #BhushanKumar @ipritamofficial #TaniBasu @ShivChanana @neerajkalyan_24 @TSeries #Diwali2025 pic.twitter.com/Ysk1U1YAJ5
— Kartik Aaryan (@TheAaryanKartik) February 15, 2025
ಅನುರಾಗ್ ಬಾಸು ಅವರು ಆಶಿಕಿ 3 ಸಿನಿಮಾದ ನಿರ್ದೇಶಕರಾಗಿದ್ದಾರೆ. ಟಿ ಸಿರೀಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಹಾಗೂ ಕ್ರಿಶನ್ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಸತ್ಯ ಪ್ರೇಮ್ ಕಿ ಕಥಾ ಸಿನಿಮಾದ ಮೂಲಕ ಮೆಚ್ಚುಗೆ ಗಳಿಸಿದ ಕಾರ್ತಿಕ್ ಆರ್ಯನ್ ಈಗ ಸಿಂಗರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಸಿನಿಮಾ ತಂಡದಿಂದ ಆಶಿಕಿ 3 ಎಂದು ಹೆಸರು ಬಹಿರಂಗಪಡಿಸಿಲ್ಲ.
ಕನ್ನಡದ ಕಿಸ್, ಭರಾಟೆ, ಬೈ ಟು ಲವ್ ಸೇರಿ ಹಲವು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ. ತೆಲುಗಿನ ಗುಂಟೂರು ಕಾರಂ, ರಾಬಿನ್ ಹುಡ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ, ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಪುಷ್ಪ 2 ಸಿನಿಮಾದ ಕಿಸಿಕ್ ಐಟಂ ಸಾಂಗ್ ನಲ್ಲಿ ಶ್ರೀಲೀಲಾ ಮಾಡಿದ ನೃತ್ಯಕ್ಕೆ ದೇಶದ ಜನ ಫಿದಾ ಆಗಿದ್ದರು. ಈಗ ಬಾಲಿವುಡ್ ನಲ್ಲೂ ಮಿಂಚಲು ಶ್ರೀಲೀಲಾ ಸಜ್ಜಾಗಿದ್ದಾರೆ.