ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ (Karnataka University) ವು ವಿವಾದಿತ ಬಿಎ ಪದವಿ ಪುಸ್ತಕದಲ್ಲಿನ ವಿಷಯವನ್ನು ಕೈ ಬಿಟ್ಟಿದ್ದಾರೆ.
ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾದಿತ ನಾಲ್ಕನೇ ಅಧ್ಯಾಯ ಕೈಬಿಟ್ಟು ಪಠ್ಯ ಪುಸ್ತಕ ಮುಂದುವರಿಕೆ ವಿವಿ ಮುಂದಾಗಿದೆ. ಈ ಕುರಿತು ಕವಿವಿ ಮೌಲ್ಯಮಾಪನ ಕುಲಸಚಿವರಿಂದ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ 2024-25 ಸಾಲಿನ ಕನ್ನಡ ಸ್ನಾತಕ ಪದವಿ ಬಿಎ ಪ್ರಥಮ ಸೆಮಿಸ್ಟರ್ ಪಠ್ಯಪುಸ್ತಕ ಬೆಳಗು – 1ರಲ್ಲಿ ಪ್ರಕಟವಾಗಿದ್ದ ನಾಲ್ಕನೇ ಅಧ್ಯಾಯದ “ರಾಷ್ಟ್ರೀಯತೆಯ ಆಚರಣೆಯ ಸುತ್ತ” ಕುರಿತು ರಾಮಲಿಂಗಪ್ಪ ಬೇಗೂರ ಬರೆದ ಲೇಖನದಲ್ಲಿ, ಕೆಲವು ಆಕ್ಷೇಪನಾರ್ಹ ಅಂಶ ಒಳಗೊಂಡಿವೆ ಎಂಬ ಆರೋಪ ಕೇಳಿ ಬಂದಿತ್ತು.
ಹೀಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಆಡಳಿತ ಇಂದು ಈ ಲೇಖನವನ್ನು ನಿಯಮಾನುಸಾರ ವಿವಿಧ ಪ್ರಾಧಿಕಾರಗಳ ಸಭೆ ನಡೆಸಿ ಲೇಖನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಕ್ರಮ ಜರುಗಿಸಲಾಗಿದೆ ಎಂದಿದ್ದಾರೆ.
ಘಟಕ-1ರ ನಾಲ್ಕನೆಯ ಅಧ್ಯಾಯದ ಈ ಲೇಖನವನ್ನು ತಕ್ಷಣದಿಂದ ಜಾರಿಗೆ ಬರುವ ಕೈಬಿಟ್ಟು (ಹೊರತುಪಡಿಸಿ) ಬೆಳಗು-1 ಪಠ್ಯಪುಸ್ತಕವನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ತತ್ಸಮಂಭಂಧಿತ ಪೂರಕ ಕಾರ್ಯಗಳನ್ನು ಜಾರಿ ಮಾಡುವುದಾಗಿ ಕುಲಸಚಿವರು ಪ್ರಕಣೆಯಲ್ಲಿ ತಿಳಿಸಿದ್ದಾರೆ. ಈ ಪಠ್ಯ ವಿವಾದ ಹಿನ್ನೆಲೆ ಜ. 29ರಂದು ನಡೆಯಬೇಕಿದ್ದ ಎನ್‌ಇಪಿ ಸೆಮಿಸ್ಟರ್-1 ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.