ಬಾಗಲಕೋಟೆ: ಮಹಾರಾಷ್ಟ್ರದ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರು ತಿರುಗೇಟು ನೀಡಿದ್ದಾರೆ.
ಇಳಕಲ್ ಬಸ್ ಗೆ ಮಹಾರಾಷ್ಟ್ರದಲ್ಲಿ ಜೈ ಮಹಾರಾಷ್ಟ್ರ ಎಂದು ಬರೆದು, ಮಸಿ ಬಳಿದ ಪ್ರಕರಣ ನಡೆದಿತ್ತು. ಇದಕ್ಕೆ ತಿರುಗೇಟು ನೀಡಿರುವ ಕನ್ನಡಿಗರು, ಮಹಾರಾಷ್ಟ್ರ ಬಸ್ ಗೆ ಜೈ ಕರ್ನಾಟಕ, ಜೈ ಕನ್ನಡ ಎಂದು ಬರೆದು ಮಸಿ ಬಳೆದಿದ್ದಾರೆ. ಚಿತ್ರದುರ್ಗ ಹಾಗೂ ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ- 50 ಕೂಡಲಸಂಗಮದ ಬಳಿ ಈ ಘಟನೆ ನಡೆದಿದೆ.
ಮಹಾರಾಷ್ಟ್ರ ಬಸ್ ಮುಂಭಾಗದಲ್ಲಿ ಜೈ ಕರ್ನಾಟಕ ಎಂದು ಬರೆಯಲಾಗಿದೆ. ಇಳಕಲ್ ಬಸ್ ನಿಲ್ದಾಣದಿಂದ ಸೋಲಾಪುರ ಕಡೆ ಹೊರಟಿದ್ದ ಬಸ್ ತಡೆದು, ಜೈ ಕರ್ನಾಟಕ ಎಂದು ಬರೆದಿದ್ದಾರೆ. ಅಲ್ಲದೇ, ಚಾಲಕನ ಕೈಗೆ ಕನ್ನಡ ಧ್ವಜ ಕೊಟ್ಟಿದ್ದಾರೆ. ಈ ವೇಳೆ ಜೈ ಕರ್ನಾಟಕ ಎಂದು ಘೋಷಣೆ ಹಾಕಿಸಿದ್ದಾರೆ.