ಬೆಂಗಳೂರು: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಪೋರ್ಟ್ ಸಿಬ್ಬಂದಿಗೆ ಸಂಕಷ್ಟ ಶುರುವಾಗಿದೆ.
ರನ್ಯಾ ರಾವ್ ಈ ಹಿಂದೆ ಟ್ರಾವೆಲ್ ಮಾಡಿದ ದಿನದಂದು ಕರ್ತವ್ಯದಲ್ಲಿದ್ದವರಿಗೆ ಸಂಕಷ್ಟ ಶುರುವಾಗಿದೆ. ಆಗ ಅವರನ್ನು ಆ ಸಂದರ್ಭದಲ್ಲಿ ಚೆಕ್ ಮಾಡಿಲ್ವಾ? ಯಾರಾದರೂ ಇವರನ್ನು ಚೆಕ್ ಮಾಡದಂತೆ ನಿರ್ದೇಶಿಸಿದ್ರಾ? ಎಂಬುವುದರ ಬಗ್ಗೆ ಗೌರವ್ ಗುಪ್ತಾ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
ಈ ಕುರಿತು ತನಿಖೆ ಕೈಗೊಂಡಿರುವ ಐಎಎಸ್ ಅಧಿಕಾರಿ ಗೌರವ್ ಗುಪ್ತಾ, ಡಿಐಜಿ ವಂಶಿಕೃಷ್ಣ, ಏರ್ ಪೋರ್ಟ್ ಟರ್ಮಿನಲ್ 2ರಲ್ಲಿ ನಲ್ಲಿ ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಏರ್ ಪೋರ್ಟ್ ನ ಭದ್ರತಾ ಅಧಿಕಾರಿ ಸಿಬ್ಬಂದಿಗಳಿಂದ ಖುದ್ದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇಮಿಗ್ರೇಷನ್ ಅಧಿಕಾರಿಗಳು, ಕಸ್ಟಮ್ಸ್ ಅಧಿಕಾರಿಗಳು, ಸಿಆರ್ ಪಿಎಫ್ ಟೀಂ, ಚೆಕಿಂಗ್ ಟೀಂನಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ.
ಈ ವೇಳೆ ಭದ್ರತಾ ಅಧಿಕಾರಿಗಳು, ಯಾರೇ ವಿದೇಶದಿಂದ ಬಂದರೂ ಇಮಿಗ್ರೇಷನ್, ಕಸ್ಟಮ್ಸ್ ಚೆಕಿಂಗ್ ಹಾಗೂ ಸೆಕ್ಯೂರಿಟಿ ಚೆಕ್ ಆಗದೆ ಹೊರಗಡೆ ಹೋಗಲು ಆಗುವುದಿಲ್ಲ. ಯಾವ ಅಧಿಕಾರಿ ಬಂದರೂ ಪ್ರೋಟೋಕಾಲ್ ಗೂ ಮೊದಲು ಚೆಕ್ಕಿಂಗ್ ಆಗಿಯೇ ಹೋಗಬೇಕು ಎಂದು ಸಿಬ್ಬಂದಿ ಹೇಳಿದ್ದಾರೆ.
ಪ್ರೋಟೋ ಕಾಲ್ ಗೆ ಕುರಿತು ಹೇಗೆಲ್ಲಾ ವ್ಯವಸ್ಥೆ ಇರುತ್ತದೆ ಎಂಬ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ನೇರವಾಗಿ ಗ್ರೀನ್ ಚಾನಲ್ ಮೂಲಕ ಕರೆತರಲು ಆಗುವುದಿಲ್ಲ. ಎರಡು ಲೇಯರ್ ನಲ್ಲಿ ಚೆಕಿಂಗ್ ಆಗಿಯೇ, ಮೂರನೇ ಲೇಯರ್ ಗ್ರೀನ್ ಚಾನಲ್ ಮೂಲಕ ಹೋಗಬೇಕಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ವೆಂಕಟರಾಜು, ಮಹಾಂತೇಶ್, ಬಸವರಾಜು ಎಂಬ ಪ್ರೋಟೊಕಾಲ್ ಸಿಬ್ಬಂದಿಗಳ ವಿಚಾರಣೆ ನಡೆಸಲಾಯಿತು.