ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅವರ ಹೇಳಿಕೆಯ ವಿರುದ್ಧ ಪರ – ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ, ಈ ಕುರಿತು ನಟಿ ಸುಧಾರಣಿ ಸಹ ಮಾತನಾಡಿದ್ದಾರೆ.
ಕರ್ನಾಟಕ ಹಾಗೂ ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತನಾಡಿದರೂ ಅದನ್ನು ಒಪ್ಪಲ್ಲ. ಆ ಸಮಯದಲ್ಲಿ ಖಂಡಿತವಾಗಿ ನಾವು ಎಲ್ಲರೂ ಒಟ್ಟಿಗೆ ನಿಂತೇ ನಿಲ್ಲುತ್ತೇವೆ. ನಮ್ಮ ಕನ್ನಡ ಭಾಷೆಯ ಬಗ್ಗೆ ದಾಖಲೆ ಇದೆ. ಅದನ್ನು ತೋರಿಸಿ ಅಂಥವರಿಗೆ ತಿಳಿಹೇಳಬೇಕು. ನಮ್ಮ ನಾಡು, ನುಡಿ ಬಗ್ಗೆ ಈ ರೀತಿ ಮಾತನಾಡಿದರೆ ಅದು ತಪ್ಪು. ಕಮಲ್ ಹಾಸನ್ ಅವರು ಕ್ಷಮೆ ಕೇಳಬಹುದು ಎಂದು ಹೇಳಿದ್ದಾರೆ.



















