ಕಲಬುರಗಿ : ಶಾರ್ಟ್ ಸರ್ಕ್ಯೂಟ್ನಿಂದ ಖಾಸಗಿ ಕ್ಲಿನಿಕ್ಕೊಂದು ಧಗಧಗನೇ ಹೊತ್ತಿ ಉರಿದಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ನಡೆದಿದೆ.
ಡಾ.ಶ್ರಿದೇವಿ ಬಿರಾದರ್ ಅವರ ಕ್ಲಿನಿಕ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶನಿವಾರಕ್ಕೊಮ್ಮೆ ವೈದ್ಯೆ ಸಿಂದಗಿಯಿಂದ ಬಂದು ಕ್ಲಿನಿಕ್ ಓಪನ್ ಮಾಡುತ್ತಿದ್ದರು. ಆದರೀಗ ಕ್ಲಿನಿಕ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಅದೃಷ್ಟಾವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕ್ಲಿನಿಕ್ನಲ್ಲಿ 2-3 ಲಕ್ಷ ಮೌಲ್ಯದ ಔಷಧಿಗಳು ಸುಟ್ಟು ಕರಕಲಾಗಿದ್ದು, ಇದರೊಂದಿಗೆ 7-8 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳೂ ಇದ್ದವು ಎನ್ನಲಾಗಿದೆ. ಈ ಘಟನೆ ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಡೆಲಿವರಿ ಬಾಯ್ ಮೇಲೆ ಹಲ್ಲೆಗೈದ ಬೈಕ್ ಸವಾರರು | ಸ್ಥಳೀಯರಿಂದ ಬಿತ್ತು ಗೂಸಾ



















