ಮಂಡ್ಯ : ಹಿಂದುತ್ವವಾದಿ ಎಂದರೆ ಏನು ಬೇಕಾದರೂ ಮಾತನಾಡುವುದಲ್ಲ. ಮಾತನಾಡುವಾಗ ಪ್ರಜ್ಞೆಯಿಂದ ಮಾತನಾಡಬೇಕು. ನಾಮ ಹಾಕಿದರೆ ಮಾತ್ರ ಹಿಂದೂ ಅಲ್ಲ ಎಂದು ಹಿಂದೂ ಸಂಘಟನೆ ಮುಖಂಡ ಪ್ರಭಾಕರ್ ಕಲ್ಲಡ್ಕ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರೂ ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ಒಂದು ಸಂಘಟನೆಯಲ್ಲಿದ್ದಾಗ ಮಾತು ಗಡಿ ಮೀರಿ ಹೋಗಬಾರದು. ಪಕ್ಷದ ಸಮಿತಿ ಒಳಗೆ ಮಾತನಾಡಬೇಕು. ಹೊರಗೆ ಮಾತನಾಡುವುದು ಹಿಂದತ್ವದ ಲಕ್ಷಣ ಅಲ್ಲಾ. ನಾಮ ಹಾಕಿ, ದೇವಸ್ಥಾನಕ್ಕೆ ಹೋದ ಮಾತ್ರಕ್ಕೆ ಹಿಂದುತ್ವವಾಗುವುದಿಲ್ಲಾ.
ಹಿಂದುತ್ವದಲ್ಲಿ ಶಿಸ್ತು ಇದೆ ಅದು ಇಲ್ಲದಿದ್ರೆ ಹಿಂದುತ್ವವಾದಿ ಆಗಲ್ಲ. ಪಕ್ಷದಲ್ಲಿ ಶಿಸ್ತು ಇಲ್ಲದಿದ್ರೆ ಈ ರೀತಿ ಸಮಸ್ಯೆ ಆಗತ್ತೆ ಎಂದು ಹೇಳಿದ್ದಾರೆ.