ಬೆಂಗಳೂರು: ದೇಶದಲ್ಲಿ ಉಚಿತ ಸಿಮ್, ಉಚಿತ ಇಂಟರ್ ನೆಟ್, ಬಳಿಕ ಕಡಿಮೆ ಬೆಲೆಗೆ ಇಂಟರ್ ನೆಟ್ ನೀಡುವ ಮೂಲಕ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿರುವ ರಿಲಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಆಫರ್ ನೀಡಿದೆ. ಅದರಲ್ಲೂ, ಏಷ್ಯಾ ಕಪ್ ಟೂರ್ನಿಯು ದಿನೇದಿನೆ ಕಾವೇರುತ್ತಿರುವ ಹೊತ್ತಿನಲ್ಲಿಯೇ ಜಿಯೋ ಕಂಪನಿಯು 77 ರೂಪಾಯಿ ರಿಚಾರ್ಜ್ ನ ಹೊಸ ಆಫರ್ ಘೋಷಣೆ ಮಾಡಿದೆ. ಇದು ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ ಆಗಿದೆ.
ಹೌದು, ಏಷ್ಯಾ ಕಪ್ 17 ನೇ ಆವೃತ್ತಿಯ ಟೂರ್ನಿಯು ಸೆಪ್ಟೆಂಬರ್ 9 ರಿಂದ ಆರಂಭವಾಗಿದ್ದು ಸೆಪ್ಟೆಂಬರ್ 28 ರವರೆಗೆ ನಡೆಯಲಿದೆ. ಇದನ್ನು ನೀವು ಆರಾಮಾಗಿ ವೀಕ್ಷಿಸಬಹುದಾಗಿದೆ. ಅದಕ್ಕಾಗಿ 77 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಳ್ಳಬೇಕಿದೆ. ಜಿಯೋದ ಈ ಯೋಜನೆಯಲ್ಲಿ, ನೀವು 3 ಜಿಬಿ ಡೇಟಾ ಮತ್ತು ಸೋನಿ ಲೈವ್ ಚಂದಾದಾರಿಕೆಯನ್ನು 30 ದಿನಗಳವರೆಗೆ ಪಡೆಯುತ್ತೀರಿ. ಈ ಚಂದಾದಾರಿಕೆಯ ಮೂಲಕ, ನೀವು ಕೇವಲ 77 ರೂ.ಗಳಿಗೆ ಏಷ್ಯಾ ಕಪ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
ರಿಚಾರ್ಜ್ ಮಾಡಿಸುವವರು ಮೊದಲು ಡೇಟಾ ಡೇಟಾ ಪ್ಯಾಕ್ ಹೊಂದಿರಬೇಕು. ನಿಮ್ಮ ಬಳಿ ಡೇಟಾ ಪ್ಯಾಕ್ ಇಲ್ಲದಿದ್ದರೆ, ನೀವು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ದೇಶದ ಯಾವುದೇ ಮೂಲೆಯಿಂದ ಕ್ರಿಕೆಟ್ ಪ್ರಿಯರು ಈ ಯೋಜನೆಯನ್ನು ಬಳಸಲು ಸಾಧ್ಯವಾಗುತ್ತದೆ. ಹಾಗಾಗಿ, ಏಷ್ಯಾ ಕಪ್ ಟೂರ್ನಿಯನ್ನು ಮೊಬೈಲ್ ನಲ್ಲಿ ವೀಕ್ಷಿಸುವವರು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ದೇಶದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ಪ್ರಸಾರ ಆಗುತ್ತಿವೆ. ಸೋನಿಲಿವ್ ಮತ್ತು ಫ್ಯಾನ್ ಕೋಡ್ ನಲ್ಲಿ ನೇರಪ್ರಸಾರ ವೀಕ್ಷಣೆ ಮಾಡಬಹುದು. ದೂರದರ್ಶನ ಮತ್ತು ಜಿಯೋ ಟಿವಿಯಲ್ಲಿ ಪಂದ್ಯಗಳನ್ನು ಉಚಿತವಾಗಿ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೆ, ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್ ಮೂಲಕವೂ ನೇರಪ್ರಸಾರವನ್ನು ವೀಕ್ಷಿಸಬಹುದು.