ಪಹಲ್ಗಾಮ್ ನಲ್ಲಿ ರಕ್ತಪಾತ ನಡೆಸಿದ ಜಿಹಾದಿ ಕ್ರಿಮಿಗಳ ಗುರುತು ಪತ್ತೆಯಾಗಿದೆ. ನರಮೇಧಕ್ಕೆ ಸಂಪೂರ್ಣ ಪೂರ್ವ ತಯಾರಿ ಮಾಡಿಕೊಂಡೇ ಬಂದಿದ್ದ ಮತಾಂಧರು, ರಕ್ತಪಾತ ನಡೆಸಿದ್ದಾರೆ.
ಅಷ್ಟಕ್ಕೂ ಐವರು ಉಗ್ರರ ಪೈಕಿ ಮೂವರ ಚಹರೆ ಪತ್ತೆಯಾಗಿದ್ದು, ಎಲ್ಲರೂ ತಮ್ಮ ಅಸಲಿ ಚಹರೆ ಬಯಲಿಗೆ ಬರದಂತೆ ಮುಖಕ್ಕೆ ಮಾಸ್ಕ್ ಧರಿಸಿದ್ದರು. ಪ್ರತಿಯೊಬ್ಬರೂ ತಮಗೊಂದು ಕೋಡ್ ನೇಮ್ ಇಟ್ಟುಕೊಂಡು ಈ ಕಾರ್ಯ ಸಾಧಿಸಿದ್ದಾರೆ. 28 ಪ್ರವಾಸಿಗರ ನೆತ್ತರು ಹೀರಿದ ಕೀಚಕರು ಮೂಸಾ, ಯೂನಸ್, ಆಸೀಫ್ ಎಂಬ ನಕಲಿ ಹೆಸರುಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ.
ಆದರೆ, ಇವರ ಅಸಲಿಯತ್ತಿನ ಜನ್ಮ ಜಾಲಾಡಿರುವ ತನಿಖಾ ತಂಡ, ಆಸೀಫ್ ಸಿಖ್ಖಾ, ಸುಲೇಮಾನ್ ಶಹಾ ಹಾಗೂ ಅಬು ತಲ್ಹಾ ಅನ್ನೋದನ್ನು ಸಾಬೀತು ಮಾಡಿದೆ. ಈ ಮೂವರೂ ದಿ ರಿಸಿಟೆನ್ಸ್ ಫ್ರೆಂಟ್ ನ ಆಗಂತುಕರಾಗಿದ್ದಾರೆ ಅನ್ನೋದೂ ದೃಡವಾಗಿದೆ.