ಜಾರ್ಖಾಂಡ್ : ಎರಡು ಕೋಟಿ ರೂ.ಗಳ ಮುಖಬೆಲೆಯ ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.
ಪಾಟ್ನಾದಿಂದ ಬನ್ನೊಂದರಲ್ಲಿ ತರಲಾಗಿದ್ದ 500 ರೂ.ಮುಖಬೆಲೆಯ ಖೋಟಾ ನೋಟುಗಳಿದ್ದ ಮೂರು ರಟ್ಟಿನ ಪೆಟ್ಟಿಗೆಗಳನ್ನು ಕಾರೊಂದಕ್ಕೆ ವರ್ಗಾಯಿಸುತ್ತಿದಾಗ ಪೋಲಿಸರು ದಾಳಿ ನಡೆಸಿದ್ದರು.
ವಶಪಡಿಸಿಕೊಳ್ಳಲಾದ ನೋಟುಗಳ ಒಟ್ಟು ಮುಖಬೆಲೆ ಎರಡು ಕೋ.ರೂ.ಗಳೆಂದು ಅಂದಾಜಿಸಲಾಗಿದೆ. ನೋಟುಗಳ ಎಣಿಕೆ ಪೂರ್ಣಗೊಂಡ ನಂತರ ನಿಖರವಾದ ಮೊತ್ತ ತಿಳಿದುಬರಲಿದೆ ಎಂದು ಪೋಲಿಸರು ತಿಳಿಸಿದರು.
ಬಂಧಿತರನ್ನು ರಾಂಚಿ ನಿವಾಸಿಗಳಾದ ಮುಹಮ್ಮದ್ ಸಾಬಿರ್ ಅಲಿಯಾಸ್ ರಾಜಾ(27) ಮತ್ತು ಸಾಹಿಲ್‌ಕುಮಾರ ಅಲಿಯಾಸ್ ಕರಣ್(32) ಎಂದು ಗುರುತಿಸಲಾಗಿದ್ದು, ಖೋಟಾ ನೋಟುಗಳ ಸಾಗಾಣಿಕೆಯ ಹಿಂದೆ ದಿಲ್ಲಿಯ ನೀರಜ್ ಕುಮಾರ್ ಚೌಧರಿ ಎಂಬಾತನ ನೇತೃತ್ವದ ಕ್ರಿಮಿನಲ್ ಗ್ಯಾಂಗ್ ನ ಕೈವಾಡವಿದೆ ಎನ್ನುವುದು ಅವರ ವಿಚಾರಣೆಯಿಂದ ತಿಳಿದು ಬಂದಿದೆ ಎಂದರು.



















