ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಆ.29ರಿಂದ ಸೆ.1ರ ವರೆಗೆ ಜಪಾನ್ ಮತ್ತು ಚೀನ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಪ್ರವಾಸದ ಮೊದಲ ಭಾಗವಾಗಿ ಆ.29ರಿಂದ 2 ದಿನ ಜಪಾನ್‌ಗೆ ಭೇಟಿ ನೀಡ ಲಿದ್ದಾರೆ. ಈ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಶಿಗೆರು ಇಶಿಬಾರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ನಂತರಕ್ಕೆ ಚೀನಕ್ಕೆ ತೆರಳಿ, ಆ.31ರಂದು ಪ್ರಾರಂಭವಾಗಲಿರುವ 2 ದಿನಗಳ ಶಾಂಫೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.



















