ವಿಶಾಖಪಟ್ಟಣ: ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (Jake Fraser-McGurk) ಆಕರ್ಷಕ ಕ್ಯಾಚ್ ಹಿಡಿದು ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ.
ಡೆಲ್ಲಿ ವಿರುದ್ಧ ಅಂಕಿತ್ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ 34 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮುನ್ನುಗುತ್ತಿದ್ದರು. ಆಗ ಕುಲದೀಪ್ ಎಸೆದ 16ನೇ ಓವರ್ ನ ಐದನೇ ಎಸೆತದಲ್ಲಿ ಸಿಕ್ಸ್ ಸಿಡಿಸಲು ಅಂಕಿತ್ ವರ್ಮಾ ಬ್ಯಾಟ್ ಬೀಸಿದರು. ಈ ಡೀಪ್ ಮಿಡ್ ವಿಕೆಟ್‌ನಲ್ಲಿದ್ದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಆಕರ್ಷಕವಾಗಿ ಜಿಗಿದು ಕ್ಯಾಚ್ ಹಿಡಿದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದಾರೆ.
ಪರಿಣಾಮ ಅಂಕಿತ್ ವರ್ಮಾ 74 ರನ್(41 ಎಸೆತ, 5 ಬೌಂಡರಿ, 6 ಸಿಕ್ಸ್) ಸಿಡಿಸಿದರು. ಈ ಮೂಲಕ ತಂಡಕ್ಕೆ ಬಹುದೊಡ್ಡ ಆಸರೆ ಸಿಕ್ಕಂತಾಯಿತು.