ಈ ವಾರ ಬಿಗ್ ಮನೆಯಿಂದ ಜಾಹ್ನವಿ ಔಟ್ ಆಗಿದ್ದಾರೆ. ಈ ವಾರ ಬಿಗ್‌ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಬಂದ್ಮೇಲೆ ಮತ್ತಷ್ಟು ರಣರೋಚಕವಾಗಿದೆ. ಮನೆಯ ಸ್ಪರ್ಧಿಗಳನ್ನ ಕೆರಳಿಸಿ ಕೆಂಡ ಮಾಡಿದ್ದರು.
ಇನ್ನು ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ನಾಮಿನೇಟ್ ಆಗಿದ್ದರು. ಎಲ್ಲರೂ ಈ ವಾರ ಉತ್ತಮವಾಗಿ ಆಟ ಆಡಿದ್ದರು. ಇವರ ಪೈಕಿ ಇದೀಗ ಜಾಹ್ನವಿ ಮನೆಯಿಂದ ಹೊರ ಬಂದಿದ್ದಾರೆ.
ಈ ಹಿಂದೆ ಕಾಕ್ರೋಚ್ ಸುಧಿ ಬಹಳ ಬೇಗ ಔಟ್ ಆಗಿದ್ದರು. 49 ದಿನಗಳ ಕಾಲ ಸುಧಿ ಮನೆ ಒಳಗೆ ಇದ್ದರು. ಆರಂಭದಿಂದಲೂ ತಮ್ಮ ಡೈಲಾಗ್‌ಗಳ ಮೂಲಕ ಪ್ರಬಲ ಸ್ಪರ್ಧಿ ಎನ್ನುವಂತೆ ಆಡಿದ್ದರು. ಅಚ್ಚರಿ ಅಂದರೆ ಈ ವಾರ ಘಟಾನುಘಟಿ ಸ್ಪರ್ಧಿಗಳೇ ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದರು. ಜಾಹ್ನವಿ ಔಟ್ ಆಗಿರೋದು ಅವರ ಫ್ಯಾನ್ಸ್‌ಗೆ ಶಾಕ್ ಆಗಿದೆ.
ಇದನ್ನೂ ಓದಿ : ಕುಚಿಕುಗಳ ಮಧ್ಯೆ ಫುಲ್ ಫೈಟ್ | ಗಿಲ್ಲಿ ವಿರುದ್ಧವೇ ತಿರುಗಿ ಬಿದ್ಲು ವಂಶದ ಕುಡಿ



















