ಬೆಂಗಳೂರು : 4100 ಕ್ಕೂ ಹೆಚ್ಚು ಮುಜರಾಯಿ ದೇವಾಲಯ ನಾಪತ್ತೆ ಆಗಿದೆಯಂತೆ. ದೇಗುಲಗಳ ನಾಪತ್ತೆ ಆಗುವುದು ಅದು ಆಶ್ಚರ್ಯ ಸಂಗತಿ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ದೇವಾಲಯದ ನಾಪತ್ತೆ ಅದ್ಭುತಗಳಲ್ಲಿ ಕೂಡ ಒಂದಾಗಿದೆ, ಯಾರ್ ನಾಪತ್ತೆ ಮಾಡಿದ್ರು? ಆನ್ ರೆಕಾರ್ಡ್ ಇರುತ್ತೆ. ಮುಜರಾಯಿ ದೇವಾಲಯ ಹುಡುಕಲು ಎಸ್‌ಐಟಿ ರಚನೆ ಮಾಡುವ ಅವಶ್ಯಕತೆ ಇದೆ. ಮುಜರಾಯಿ ದೇಗುಲ ಎಲ್ಲಿ ನಾಪತ್ತೆ ಅದು ಯಾರೂ ಕಿಡ್ನಾಪ್ ಮಾಡಿದ್ದಾರೆ. ಮುಜರಾಯಿ ದೇಗುಲದ ಆಸ್ತಿ ಏನಾಯ್ತು? ಎಲ್ಲಾ ಸತ್ಯಾಸತ್ಯೆಗಳು ಹೊರಬರಬೇಕು ಅಂದ್ರೆ ಸಿದ್ದರಾಮಯ್ಯನವರೇ ಎಸ್‌ಐಟಿ ರಚನೆ ಮಾಡಬೇಕು ಎಂದು ಆಗ್ರಹ ಮಾಡುತ್ತೇನೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಪಾದಯಾತ್ರೆ ವಿಚಾರ
ರಾಜ್ಯದ ಉದ್ದಗಲಕ್ಕೂ ಐದಾರು ಪ್ರಮುಖ ವಿಚಾರ ಇಟ್ಕೊಂಡು ಹೋರಾಟ ಮಾಡಬೇಕು ಎಂದು ಕೋರ್ ಕಮಿಟಿ ನಿರ್ಧಾರ ಮಾಡಿದೆ. ಮೊದಲು ಹೋರಾಟ ಮಾಡ್ತೀವಿ. ಅದರ ನಂತರ ಏನ್ ಮಾಡಬೇಕು ಅಂತ ಪಕ್ಷದ ಕೋರ್ ಕಮಿಟಿ ಸಮಾಲೋಚನೆ ಪಕ್ಷದ ಪ್ರಮುಖರ ಜೊತೆಗೆ ಮಾತುಕತೆ ನಡೆಸಿ, ಸಾಧಕ ಬಾದಕಗಳನ್ನು ಗಮನಿಸಿ ನಿರ್ಣಯವನ್ನು ಮಾಡ್ತೀವಿ. ಮೊದಲನೇ ಹಂತದಲ್ಲಿ ಬಳ್ಳಾರಿ, ಹುಬ್ಬಳ್ಳಿ, ಮೈಸೂರು, ಕಲಬುರಗಿ ಭಾಗದಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಸಿಎಂ ಡಿಸಿಎಂ ಇಂದು ರಾಹುಲ್ ಗಾಂಧಿ ಭೇಟಿ ಮಾಡುವ ವಿಚಾರ
ನಾವು ಕಾಂಗ್ರೆಸ್ ಆಂತರಿಕ ವಿಚಾರ ಹಾಗೂ ಕಚ್ಚಾಟಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮೂಗು ತೋರಿಸಲ್ಲ. ಬುದ್ಧಿ ಇಲ್ಲದೇ ಇರುವ ರಾಹುಲ್ ಗಾಂಧಿ, ಇವರ ಕಚ್ಚಾಟಕ್ಕೆ ಬುದ್ಧಿ ಹೇಳುತ್ತಾರೆ ಅಂತ ವಿಶ್ವಾಸ ಇದೆಯಾ? ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕಚ್ಚಾಡುತ್ತಿರುವುದರಿಂದ ರಾಜ್ಯದ ಆಡಳಿತದ ಮೇಲೆ ಕೆಟ್ಟ ಪರಿಣಾಮಗಳು ಬೀಳ್ತಾ ಇದೆ. ಇದಕ್ಕೆಲ್ಲ ರಾಹುಲ್ ಗಾಂಧಿ ಬುದ್ಧಿ ಹೇಳ್ತಾರೆ? ಬುದ್ಧಿ ಇರೋರು ಬುದ್ದಿ ಹೇಳುತ್ತಾರೆ ಬುದ್ಧಿ ಇಲ್ದೆ ಇರೋರ್ ಏನ್ ಹೇಳ್ತಾರೆ ಎಂದಿದ್ದಾರೆ.
ಡಿಸಿಎಂ ಹಾಗೂ ಸಿಎಂ ಇಬ್ರನ್ನು ಕರೆದಿದ್ದಾರೆ ಅಂದ್ರೆ..ವೆಸ್ಟ್ ಬೆಂಗಾಳ್, ಅಸ್ಸಾಂ ಚುನಾವಣೆ ಇದೆ. ಎಷ್ಟ್ ದುಡ್ಡು ಕೊಡ್ತೀರಾ ಅಂತ ಕೇಳೋಕ್ಕೆ ಇರಬಹುದು. ಕರ್ನಾಟಕದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಗೆ ಹಿತಾಸಕ್ತಿ ಕಾಪಾಡೋಕೆ ಆಸಕ್ತಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಕೋಗಿಲು ಲೇಔಟ್ ಅಕ್ರಮ ಒತ್ತುವರಿ ತೆರವು | ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ ಜಿಲ್ಲಾಧಿಕಾರಿ .. 26 ಜನರಿಗೆ ಮಾತ್ರ ಗೃಹಭಾಗ್ಯ


















