ಮಂಗಳೂರು: ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ನಿಗದಿಯಾಗಿದ್ದ ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನಗಳ ಹಾರಾಟವನ್ನು ಹಠಾತ್ ರದ್ದುಗೊಳಿಸಲಾಗಿದೆ.
ಪ್ರಮುಖವಾಗಿ ದುಬೈಗೆ ತೆರಳುವ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇರಾನ್ ವಾಯು ಮಾರ್ಗದಲ್ಲಿ ವಿಮಾನ ಹಾರಾಟ ನಿಷೇಧ ಹೇರಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಏರ್‌ಪೋರ್ಟ್‌ನಿಂದ ರದ್ದಾದ ವಿಮಾನಗಳು
– 9.25 ರ ಮಂಗಳೂರು – ಮಸ್ಕತ್ ಏರ್ ಇಂಡಿಯಾ ಎಕ್ಸ್‌ಪ್ರೆಸ್
– ಮಧ್ಯಾಹ್ನ 1.20 ರ ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್
– ರಾತ್ರಿ 7.15ರ ಮಂಗಳೂರು – ದುಬೈ ಇಂಡಿಗೊ
– ರಾತ್ರಿ 8.15ರ ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್
– ರಾತ್ರಿ 8.55ರ ಮಂಗಳೂರು – ಬಹರೇನ್ ಏರ್ ಇಂಡಿಯಾ ಎಕ್ಸ್‌ಪ್ರೆಸ್
– ರಾತ್ರಿ 9.05ರ ಮಂಗಳೂರು – ಅಬುಧಾಬಿ ಇಂಡಿಗೊ
ಗಲ್ಪ್ ರಾಷ್ಟ್ರಗಳಿಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟವೂ ರದ್ದುಗೊಂಡಿದೆ. ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಸಂಬಂಧಿತ ವಿಮಾನ ಸಂಸ್ಥೆಗಳ ವೆಬ್‌ಸೈಟ್ ಸಂಪರ್ಕಿಸುವಂತೆ ಸೂಚಿಸಲಾಗಿದೆ.
ವಿಮಾನ ನಿಲ್ದಾಣ ಪ್ರಾಧಿಕಾರಿಗಳು, ವಿದೇಶಕ್ಕೆ ಪ್ರಯಾಣಿಸುವವರು ತಮ್ಮ ವಿಮಾನ ಹಾರಾಟದ ಬಗ್ಗೆ ಆಯಾ ಸಂಸ್ಥೆಗಳಿಂದ ಖಚಿತಪಡಿಸಿಕೊಂಡ ಬಳಿಕವೇ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಜಾಗತಿಕ ತೈಲ ಪೂರೈಕೆಯ ಜೀವನಾಡಿ ‘ಹೋರ್ಮುಜ್ ಜಲಸಂಧಿ’ ಬಂದ್? ಇರಾನ್-ಅಮೆರಿಕ ಸಂಘರ್ಷದಿಂದ ಜಗತ್ತಿಗೆ ಆರ್ಥಿಕ ಹೊಡೆತದ ಭೀತಿ



















