ಜೆರುಸಲೇಂ: ಇರಾನ್ ಮೇಲೆ ಇಸ್ರೇಲ್ (Israel Air Strike) ನಿಂದ ನಡೆದ ದಾಳಿಯಲ್ಲಿ 78 ಜನ ಸಾವನ್ನಪ್ಪಿ, 329 ಜನ ಗಾಯಗೊಂಡಿದ್ದಾರೆ. ಇರಾನ್‌ನ (Iran) ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೌನ್ ಅಬ್ಬಾಸಿ ಸೇರಿದಂತೆ 6 ಪರಮಾಣು ವಿಜ್ಞಾನಿಗಳು ಸಹ ಬಲಿಯಾಗಿದ್ದಾರೆ.
ಟೆಹರಾನ್ ಸೇರಿ ಹಲವೆಡೆ ಕ್ಷಿಪಣಿ ದಾಳಿ ನಡೆಸಿದ್ದ ಇಸ್ರೇಲ್ ‘ಸ್ಟ್ರೆಂತ್ ಆಫ್ ಎ ಲಯನ್’ ಕಾರ್ಯಾಚರಣೆಯಡಿ ಕ್ಷಿಪಣಿ ದಾಳಿ ನಡೆಸಿತ್ತು. ಇಸ್ರೇಲ್ ಇಂದು ಇರಾನ್‌ನಾದ್ಯಂತ ಸರಣಿ ವೈಮಾನಿಕ ದಾಳಿ ನಡೆದಿ. ದಾಳಿಯಲ್ಲಿ ಪರಮಾಣು ವಿಜ್ಞಾನಿಗಳು ಮತ್ತು ಮಿಲಿಟರಿ ನಾಯಕರನ್ನು ಬಲಿ ಪಡೆದಿದೆ. ದಾಳಿಯ ಸಮಯದಲ್ಲಿ, ಇರಾನ್ನ ಕ್ರಾಂತಿಕಾರಿ ಗಾರ್ಡ್‌ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಜನರಲ್ ಹಾಜಿಜಾದೆ ಹತ್ಯೆಯಾಗಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಇಸ್ರೇಲ್ ದಾಳಿ ನಡೆದ ಕೆಲವು ಗಂಟೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಇಸ್ರೇಲ್ ಜೊತೆ ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ.