ಬೆಂಗಳೂರು: ತುರ್ತು ಸಂದರ್ಭ ಎಂದು ಬ್ಯಾಂಕುಗಳಲ್ಲಿ ಸಾಲ ಪಡೆದಿರುತ್ತವೆ. ಒಂದೆರಡು ಇಎಂಐ ತಡವಾಗಿ ಕಟ್ಟಿರುತ್ತೇವೆ. ಅದಕ್ಕೆ ಬಡ್ಡಿಯನ್ನೂ ಕಟ್ಟಿರುತ್ತೇವೆ. ಇದರಿಂದಾಗಿ ಸಿಬಿಲ್ ಸ್ಕೋರ್ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ. ಸಾಲ ತೀರಿಸಿದ ಬಳಿಕ ಇದು ಸರಿಹೋಗುತ್ತದೆ ಎಂದು ಸುಮ್ಮನಾಗಿರುತ್ತೇವೆ. ಆದರೆ, ಕೆಲವೊಮ್ಮೆ ಸಾಲ ತೀರಿಸಿದ ಬಳಿಕವೂ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗಿರುವುದಿಲ್ಲ. ಬ್ಯಾಂಕುಗಳಿಂದ ವರದಿ ಸಲ್ಲಿಕೆ ವಿಳಂಬವಾಗಿಯೋ, ತಾಂತ್ರಿಕ ದೋಷದಿಂದಲೋ ಅಪ್ಡೇಟ್ ಆಗಿರುವುದಿಲ್ಲ. ಆದರೆ, ಸಾಲ ತೀರಿಸಿದವರು ಇಂತಹ ಸಂದರ್ಭದಲ್ಲಿ ಗಾಬರಿ ಆಗಬೇಕಿಲ್ಲ. ಕೆಲವು ಪ್ರಕ್ರಿಯೆ ಪಾಲಿಸಿದರೆ ಸಾಕು, ನಿಮ್ಮ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗುತ್ತದೆ.
ಕ್ರೆಡಿಟ್ ಸ್ಕೋರ್ ಏಕೆ ಮುಖ್ಯ?
ಆಧುನಿಕ ಕಾಲದಲ್ಲಿ ಯಾವುದೇ ವ್ಯಕ್ತಿಯ ಹಣಕಾಸು ಶಿಸ್ತನ್ನು ಅಳೆಯಲು ಕ್ರೆಡಿಟ್ ಸ್ಕೋರ್ ತುಂಬ ಮುಖ್ಯವಾಗಿದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಅಂದರೆ 700ಕ್ಕಿಂತ ಹೆಚ್ಚಿದ್ದರೆ ಮಾತ್ರ ಬ್ಯಾಂಕುಗಳು ಸಾಲ ನೀಡುತ್ತವೆ. ಇಲ್ಲದಿದ್ದರೆ ಸಾಲ ನೀಡುವುದಿಲ್ಲ ಅಥವಾ ಹೆಚ್ಚಿನ ಬಡ್ಡಿ ವಿಧಿಸುತ್ತವೆ. ಹಾಗಾಗಿ, ಸಿಬಿಲ್ ಸ್ಕೋರ್ ಎಂಬುದು ತುಂಬ ಮುಖ್ಯವಾಗಿರುತ್ತದೆ. ಸಾಲ ತೀರಿಸಿದ ಬಳಿಕ ಅದನ್ನು ಅಪ್ಡೇಟ್ ಮಾಡಿಸುವುದು ಕೂಡ ಪ್ರಮುಖ ಸಂಗತಿಯಾಗಿದೆ.
ಈ ಮೂರು ಪ್ರಕ್ರಿಯೆ ಅನುಸರಿಸಿ
1. ಸಾಲ ತೀರಿಸಿದವರು ಬ್ಯಾಂಕಿನಿಂದ ಲೋನ್ ಕ್ಲೋಷರ್ ಡಾಕ್ಯುಮೆಂಟ್ ಗಳನ್ನು ಪಡೆಯೇಬಕು. ನೀವು ಸಾಲ ತೀರಿಸಿದ್ದೀರಿ ಎಂದು ತಿಳಿಸಿ ಬ್ಯಾಂಕುಗಳು ಪ್ರಮಾಣಪತ್ರ ನೀಡುತ್ತವೆ. ನೀವು ಪಡೆದ ಸರ್ಟಿಫಿಕೇಟ್ ನಲ್ಲಿ ನಿಮ್ಮ ಕೊನೆಯ ಇಎಂಐ ದಿನಾಂಕವೂ ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳಿ.
2. ಇದಾದ ಬಳಿಕ ನೀವು ಸಿಬಿಲ್ ಕ್ರೆಡಿಟ್ ಬ್ಯೂರೋದ ವೆಬ್ ಸೈಟ್ ಗೆ ಹೋಗಿ ಡಿಸ್ಪ್ಯೂಟ್ ರೆಸಲ್ಯೂಶನ್ ಪೋರ್ಟಲ್ ನಲ್ಲಿ ನಿಮ್ಮ ಸಮಸ್ಯೆ ವಿವರಿಸಿ. ಅಗತ್ಯ ದಾಖಲೆಗಳನ್ನು ಸಲ್ಲಿಸಿ.
3. ನೀವು ಸಲ್ಲಿಸಿದ ಕ್ರೆಡಿಟ್ ಬ್ಯೂರೋದವರು ಪರಿಶೀಲನೆ ನಡೆಸುತ್ತಾರೆ. 7ರಿಂದ 21 ವರ್ಕಿಂಗ್ ಡೇಸ್ ನಲ್ಲಿ ಸಮಸ್ಯೆ ಬಗೆಹರಿಯಬುದು. ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗಬಹುದು.



















