ಉಡುಪಿ : ಸಾಮಾಜಿಕ ಜಾಲತಾಣದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಶ್ರದ್ಧಾಂಜಲಿ ಪೋಸ್ಟ್ ಹಾಕಿ ವೈರಲ್ ಮಾಡಿರೋದು ಜನರ ಮಾನಸಿಕತೆ ಬಗ್ಗೆ ತಿಳಿಸುತ್ತದೆ. ಪಕ್ಷ ಟಿಕೆಟ್ ನೀಡಬಹುದು ಜನರ ಒಲವಿನಿಂದ ಅವರು ಶಾಸಕಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಇಂತಹ ವಿಕೃತಿಯನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ರಾಜ್ಯದ ಸಿಎಂ ವಿರುದ್ಧ ಬರೆದರೆ ರಾತ್ರಿ ಪತ್ರಕರ್ತರನ್ನು ಎತ್ತಿಕೊಂಡು ಹೋಗುತ್ತಾರೆ. ಅವರಿಗೊಂದು ಕಾನೂನು ಶಾಸಕಿಗೆ ಮತ್ತೊಂದು ಕಾನೂನು ಇದೆಯಾ..? ದಲಿತ ಮಹಿಳೆಯ ಮೇಲೆ ಜಾತಿನಿಂದನೆ ನಾವು ಸಹಿಸೋದಿಲ್ಲ ಎಂದು ಹೇಳಿದ್ದಾರೆ.

ಏನಿದು ಪ್ರಕರಣ:
ಬಿಲ್ಲವ ಸಂದೇಶ್ ಎನ್ನುವ ಫೇಸ್ ಬುಕ್ ಖಾತೆಯಲ್ಲಿ ಶ್ರದ್ಧಾಂಜಲಿ ಪೋಸ್ಟ್ ಹಾಕಲಾಗಿತ್ತು. ‘ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಳ ಇವರು, ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೆ ಇಂದು ಎಲ್ಲರನ್ನೂ ಅಗಲಿದ್ದಾರೆ. ಇವರ ಅಗಲಿಕೆಯನ್ನು ಭರಿಸುವ ಶಕ್ತಿ ಬ್ಲೂಜೆಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಹೇಳುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆʼ ಎಂದು ಬರೆಯಲಾಗಿತ್ತು.
ಇದನ್ನೂ ಓದಿ : 2028ರ ವರೆಗೂ ಸಿದ್ದರಾಮಯ್ಯನವರೇ ಸಿಎಂ, ಹೈಕಮಾಂಡ್ ಅವರೊಂದಿಗಿದೆ | ಜಮೀರ್ ಅಹ್ಮದ್



















