ಬೆಂಗಳೂರು: ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಅಸಾಂವಿಧಾನಿಕ ಪದಬಳಕೆ ಮಾಡಿರುವ ಆರೋಪ ಎದುರಿಸುತ್ತಿರುವ ವಿಪ ಸದಸ್ಯ ಎನ್. ರವಿಕುಮಾರ್ ಗೆ ಬಂಧನ ಭೀತಿ ಎದುರಾಗಿದೆ. ಹೀಗಾಗಿ ರವಿಕುಮಾರ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ರವಿಕುಮಾರ್ ವಿರುದ್ಧ ನಿನ್ನೆಯಷ್ಟೇ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರವಿಕುಮಾರ್ ಈ ಹಿಂದೆ ಕೂಡ ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಮೇ 24ರಂದು ಕಾರ್ಯಕ್ರಮವೊಂದರಲ್ಲಿ ಡಿಸಿಗೆ ಪಾಕಿಸ್ತಾನದಿಂದ ಬಂದಿದ್ದಾರಾ ಎಂದು ಹೇಳಿಕೆ ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರವಿಕುಮಾರ್ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ ಈ ಹೊಸ ಆರೋಪವನ್ನು ರವಿ ನಿರಾಕರಿಸಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಎನ್.ರವಿಕುಮಾರ್ ಸಮರ್ಥನೆ ನೀಡಿದ್ದಾರೆ. ಸಿಎಸ್ ಅವರು ಬ್ಯುಸಿ ಇರ್ತಾರೆ ಎಂದು ಹೇಳಿದ್ದೇನೆ.ಅವಹೇಳನಕಾರಿಯಾಗಿ ಒಂದೂ ಶಬ್ದ ಮಾತನಾಡಿಲ್ಲ. ಪ್ರೊಟೆಸ್ಟ್ ವೇಳೆ ಸಿಎಸ್ ವಿರುದ್ಧ ಭಾಷಣ ಮಾಡಿಲ್ಲ. ಈ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ ಎಂದಿದ್ದಾರೆ. ಈ ಕುರಿತು ರವಿಕುಮಾರ್ ಕೋರ್ಟ್ ಮೊರೆ ಕೂಡ ಹೋಗಿದ್ದಾರೆ.