ಒಂದು ಕಾಲದಲ್ಲಿ ಟಾಪ್ ಹಿರೋಹಿನ್ ಗಳ ಸಾಲಿನಲ್ಲಿ ಖುಷ್ಬು ಸುಂದರ್ ಇದೀಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ತೊಂಭತ್ತರ ದಶಕದಲ್ಲಿ ಯಾವಾಗ ಖುಷ್ಬು ಸಿನಿಮಾ ರಿಲೀಸ್ ಆಗತ್ತೋ? ಯಾವಾಗ ತೆರೆಮೇಲೆ ನೋಡ್ತೀವೋ? ಅಂತಾ ಅಭಿಮಾನಿಗಳು ಕಾಯುತ್ತಿದ್ದರು. ಅಷ್ಟೊಂದು ಕ್ರೆಜ್ ಇತ್ತು. ಈಗ ಅವರ ಕುಟುಂಬದಿಂದ ಮತ್ತೊಂದು ಅಪ್ಡೇಟ್ ಸಿಕ್ಕಿದೆ.
ಖುಷ್ಬು ಅವರ ಮೊದಲ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರರಂಗದಲ್ಲಿ ಈ ರೀತಿಯ ಕೆಲವೊಂದು ಮಾತುಗಳು ಹರಿದಾಡುತ್ತಿವೆ. ಖುಷ್ಬೂ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವಂತಿಕಾ ಹಾಗೂ ಆನಂದಿತಾ. ಹಿರಿಯ ಮಗಳು ಅವಂತಿಕಾ ಪ್ರಸ್ತುತ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಅವಂತಿಕಾ ಆಗಾಗ ಗ್ಲಾಮರಸ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾ, ಪಡ್ಡೆ ಹುಡುಗರ ಹಾರ್ಟ್ ಕದ್ದಿದ್ದಾರೆ. ಈ ಮಧ್ಯೆ, ಅವಂತಿಕಾ ಕೂಡ ತನ್ನ ತಾಯಿಯಂತೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಅವಂತಿಕಾ ಇಂಡಸ್ಟ್ರೀ ಎಂಟ್ರಿ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುವುದನ್ನು ಕಾದು ನೋಡಬೇಕಾಗಿದೆ. ನಟಿ ಖುಷ್ಬೂ ಸುಂದರ್ ಅವರು ಕನ್ನಡದ ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ ಸೇರಿದಂತೆ ಸಾಕಷ್ಟು ಸಿನಿಮಾ ಗಳಲ್ಲಿ ನಟಿಸಿದ್ದಾರೆ.