ಬೆಂಗಳೂರು: ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಅಕ್ಷರಶಃ ಬೆಂಗಳೂರು ನಲುಗಿ ಹೋಗಿದೆ. ರಸ್ತೆಯಲ್ಲೆಲ್ಲ ನೀರು ತುಂಬಿಕೊಂಡು, ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗುವಂತಾಗಿದೆ. ಪರಿಣಾಮ ಮಳೆ ನೀರಿಗೆ ಮನೆ, ಕಚೇರಿಗಳಲ್ಲಿದ್ದ ಪೀಠೋಪಕರಣಗಳು, ಮನೆಯ ಸಾಮಾಗ್ರಿಗಳು, ತರಕಾರಿ, ತೇಲಿ ಹೋಗಿವೆ.
ವಿಜಯನಗರದ ಮಾರುತಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಮುಂದಿನ 12 ಗಂಟೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆಯಾಗಿದ್ದು, ಸಂಚಾರ ದಟ್ಟಣೆ ಮತ್ತು ವಿದ್ಯುತ್ ವ್ಯತ್ಯಯ ಉಂಟಾಗಿದೆ.



















