ಇರಾನ್-ಇಸ್ರೇಲ್ ನಡುವಿನ ಸಂಘರ್ಷ ತಾರಕ್ಕೇರಿದೆ. ಇಸ್ರೇಲ್ ಮೇಲೆ ಮುಗಿಬಿದ್ದಿರುವ ಇರಾನ್ ಇವತ್ತು ರಾಜಧಾನಿ ಟೆಲ್ ಅವೀವವನ್ನು ಟಾರ್ಗೆಟ್ ಮಾಡಿ ದಾಳಿ ಮುಂದುವರಿಸಿದೆ.
ಟೆಲ್ ಅವೀವ್ ನಗರದಲ್ಲಿ ಸೈರನ್ ಮೊಳಗಿದ್ದು, ಸ್ಥಳೀಯರು ಬಂಕರ್ ಸೇರುವಂತೆ ಸೂಚಿಸಲಾಗಿದೆ. ಇದರ ಬೆನ್ನಲ್ಲೇ 1 ಸಾವಿರಕ್ಕೂ ಹೆಚ್ಚು ಡ್ರೋನ್ ಗಳು ನಗರದ ಮೇಲೆ ದಾಳಿ ಮಾಡಿವೆ.
ಅದರಲ್ಲೂ ಜನವಸತಿ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿ ಈ ಅಟ್ಯಾಕ್ ನಡೆಸಲಾಗಿದೆ. ಇದರ ಬೆನ್ನಲ್ಲೇ 400ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪ್ರಯೋಗಿಸಿರುವ ಇರಾನ್, ಇಸ್ರೇಲ್ ವಿರುದ್ಧ ದೊಡ್ಡ ಮಟ್ಟದ ದಾಳಿ ಆರಂಭಿಸಿದೆ. ಅಮೆರಿಕ ಬಹಿರಂಗ ಬೆಂಬಲ ಘೋಷಣೆ ಬೆನ್ನಲ್ಲೇ ಇರಾನ್ ತನ್ನ ಆರ್ಭಟವನ್ನು ಹೆಚ್ಚಿಸಿದೆ.