ಹಾಸನ/ಮೈಸೂರು: ದ್ವೀಪ ರಾಷ್ಟ್ರ ಬಹ್ರೇನ್ನಲ್ಲಿ ಹಾಸನ ಜಿಲ್ಲೆಯ ಐವರು ಸಿಲುಕಿದ್ದಾರೆ. ಬಹ್ರೇನ್ ರಾಜಧಾನಿ ಮನಾಮರಲ್ಲಿರುವ ಕಟ್ಟಡವೊಂದರಲ್ಲಿ ಕನ್ನಡಿಗರು ಆಶ್ರಯ ಪಡೆದಿದ್ದಾರೆ.
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅಂಗಡಿಹಳ್ಳಿಯ ಪಂಜು, ಜಮುನ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ತಾವಿರುವ ಕಟ್ಟಡದ ಪಕ್ಕದಲ್ಲೇ ಬಾಂಬ್ ಸಿಡಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಗರ ರಕ್ಷಣೆಗೆ ಕುಟುಂಬ ಸದಸ್ಯರ ಮೊರೆ ಹೋಗಿದ್ದಾರೆ.
ಇನ್ನೂ ಇತ್ತ ಶಾರ್ಜಾ ವಿಮಾನ ನಿಲ್ದಾಣದಲ್ಲಿ ದಾವಣಗೆರೆ ಪ್ರವಾಸಿಗರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಜಗಳೂರು ತಾಲ್ಲೂಕು ತೋರಣಘಟ್ಟದ ಗ್ರಾಮದ 15 ಜನ ಪ್ರವಾಸಿಗರು (Tourists) ಕಳೆದ ಫೆಬ್ರವರಿ 23 ರಂದು ದುಬೈ ಮತ್ತಿತರ ನಗರಗಳಿಗೆ ಪ್ರವಾಸ ಹೊರಟಿದ್ದರು. ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದಲ್ಲಿ ಶಾರ್ಜಾ ಏರ್ ಪೋರ್ಟ್ ನಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಬಾಂಬ್ ಸ್ಪೋಟ ಹಾಗೂ ಇನ್ನಿತರ ಅವಘಡಗಳು ಸಂಭವಿಸಬಹುದು ಎಂದು ಮುಂಜಾಗ್ರತವಾಗಿ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ.
ದಾವಣಗೆರೆಯ 15 ಜನ ಸೇರಿ ಚಿತ್ರದುರ್ಗ, ಬಳ್ಳಾರಿಯಿಂದ 50 ಜನ ಪ್ರವಾಸಿಗರು ಏರ್ಪೋಟ್ನಲ್ಲೇ ಉಳಿದಿದ್ದಾರೆ. ಭದ್ರತಾ ಸಿಬ್ಬಂದಿ ಏರ್ ಪೋರ್ಟ್ ಸಮೀಪದ ಹೋಟೆಲ್ವೊಂದಕ್ಕೆ ಕಳುಹಿಸಿದ್ದು ದುಬಾರಿ ಹೋಟೆಲ್ ಶುಲ್ಕ ಬರಿಸಲಾಗದೇ, ಪ್ರವಾಸಿಗರು ತಾಯ್ನಾಡಿಗೂ ಬರಲಾಗದೆ ಪರದಾಡುತ್ತಿದ್ದಾರೆ. ಕೂಡಲೇ ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ನಲ್ಲಿ ಖಮೇನಿ ಹತ್ಯೆ ಖಂಡಸಿ ಬೃಹತ್ ಪ್ರತಿಭಟನೆ



















