ಬೆಂಗಳೂರು: ಪ್ರತಿಷ್ಠಿತ ಆಡಿಟ್, ಫೈನಾನ್ಶಿಯಲ್ ಅಡ್ವೈಸರಿ ಕಂಪನಿಯಾಗಿರುವ ‘ಡೆಲಾಯ್ಟ್ ಇಂಡಿಯಾ’ವು 2025ನೇ ಸಾಲಿನಲ್ಲಿ ಇಂಟರ್ನ್ ಶಿಪ್ ಯೋಜನೆಯನ್ನು ಘೋಷಣೆ ಮಾಡಿದೆ. ಕಂಪ್ಯೂಟರ್ ಸೈನ್ಸ್ ಹಾಗೂ ತತ್ಸಮಾನ ಪದವಿ ಪಡೆದ ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ನೀಡುವ, ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುವ ಅನುಭವವನ್ನು ಡೆಲಾಯ್ಟ್ ಇಂಡಿಯಾ ಕಂಪನಿಯಲ್ಲಿ ಪಡೆಯಬಹುದಾಗಿದೆ. ಇಂಟರ್ನ್ ಶಿಪ್ ವೇಳೆಯೇ ಮಾಸಿಕ 30 ಸಾವಿರ ರೂ. ಸ್ಟೈಪೆಂಡ್ ಕೂಡ ನೀಡಲಾಗುತ್ತದೆ.
ಇಂಟರ್ನ್ ಶಿಪ್ ವೇಳೆ ಕೇವಲ ತರಬೇತಿಯ ಮಟ್ಟಕ್ಕೆ ಮಾತ್ರ ಸೀಮಿತವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯವಸ್ಥಿತ ಆನ್ ಬೋರ್ಡಿಂಗ್ ಪ್ರಕ್ರಿಯೆ, ಡೆಲಾಯ್ಟ್ ಯೂನಿವರ್ಸಿಟಿ ಎಂಬ ವೈಶಿಷ್ಟ್ಯಪೂರ್ಣ ಲರ್ನಿಂಗ್ ಪ್ಲಾಟ್ಫಾರ್ಮ್ ಗೆ ಪ್ರವೇಶವಿದೆ. ಅನುಭವಸ್ಥ ಹಿರಿಯರ ಮಾರ್ಗದರ್ಶನ ಲಭ್ಯವಾಗುತ್ತದೆ. ಯುವ ಪ್ರತಿಭೆಗಳ ವೃತ್ತಿ ಬೆಳವಣಿಗೆಗೆ ಇಂಟರ್ನ್ ಶಿಪ್ ಒಳ್ಳೆಯ ಅವಕಾಶ ನೀಡುತ್ತದೆ. ಇಂಟರ್ನ್ ಶಿಪ್ ಸಂಪೂರ್ಣಗೊಳಿಸಿದವರಿಗೆ ಅಧಿಕೃತ ಪ್ರಮಾಣಪತ್ರವೂ ಲಭ್ಯವಾಗುತ್ತದೆ. ಇದು ಭವಿಷ್ಯದಲ್ಲಿ ಡೆಲಾಯ್ಟ್ ಅಥವಾ ಇತರ ಐಟಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ.
ಇಂಟರ್ನ್ ಶಿಪ್ ಗೆ ಆಯ್ಕೆಯಾದ ಅಭ್ಯರ್ಥಿಯು ಕೋಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು, ಬೂಟ್ಕ್ಯಾಂಪ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ಅಥವಾ ತಾಂತ್ರಿಕ ಸಮುದಾಯಗಳಲ್ಲಿ ಚಟುವಟಿಕೆ ನಡೆಸಿರುವುದು ಸೇರಿ ಹಲವು ರೀತಿಯ ಅವಕಾಶ ನೀಡಲಾಗುತ್ತದೆ. ಹೊರಾಂಗಣದ ಚಟುವಟಿಕೆಗಳು ಅಭ್ಯರ್ಥಿಯ ಉತ್ಸಾಹ, ಶ್ರದ್ಧೆ ಮತ್ತು ತಾಂತ್ರಿಕ ನೈಪುಣ್ಯತೆಯ ಸೂಚಕರಾಗಿ ಕೆಲಸ ಮಾಡುತ್ತವೆ.
ಅರ್ಜಿ ಸಲ್ಲಿಸುವುದು ಹೇಗೆ?
- ಡೆಲಾಯ್ಟ್ ಇಂಡಿಯಾ ವೆಬ್ ಸೈಟ್ https://delo.tt/60462gdl4 ಗೆ ಭೇಟಿ ನೀಡಬೇಕು
- Careers ವಿಭಾಗಕ್ಕೆ ಹೋಗಿ, “QA Engineer Intern” ಎಂಬ ಆಪ್ಶನ್ ಹುಡುಕಬೇಕು
- ಹುದ್ದೆಯ ಜಾಹೀರಾತು ಪುಟದಲ್ಲಿ ನೀಡಲಾಗಿರುವ ಸೂಚನೆಗಳನ್ನು ಓದಿ, ತಮ್ಮ ಅರ್ಹತೆಗಳನ್ನು ಪರಿಶೀಲಿಸಿ, ಆನಂತರ “Apply” ಬಟನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ವೇಳೆ ಸಿದ್ಧಪಡಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಮತ್ತು ವೈಯಕ್ತಿಕ ಮಾಹಿತಿಯನ್ನು ಸರಿಯಾಗಿ ಪೂರೈಸುವುದು ಬಹುಮುಖ್ಯ.