ಬೆಂಗಳೂರು : ರಾಜ್ಯದಲ್ಲಿ ಭಾರೀ ಹೋರಾಟಕ್ಕೆ ಕಾರಣವಾಗಿದ್ದ ಒಳಮೀಸಲಾತಿ ವರದಿ ಕೊನೆಗೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ದಲಿತ ಸಮುದಾಯದ ಒಳ ಪಂಗಡಗಳಿಗೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಈ ವರದಿ ಮಹತ್ವ ಪಡೆದುಕೊಂಡಿದೆ.
ಇಂದು(ಸೋಮವಾರ) ವಿಧಾನಸೌಧದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ 1766 ಪುಟಗಳ ವರದಿಯನ್ನು ನೀಡಿದ್ದಾರೆ. ಇದರಲ್ಲಿ ಆರು ಶಿಫಾರಸ್ಸುಗಳು ಒಳಗೊಂಡಿವೆ.
ಸಚಿವ ಕೆ ಹೆಚ್ ಮುನಿಯಪ್ಪ ಈ ಸಂಬಂಧಿಸಿದಂತೆ ಮಾತನಾಡಿ,”ಸುಮಾರು 35 ವರ್ಷಗಳ ಸಿಎಂ, ಡಿಸಿಎಂ ಕಮಿಷನ್ ನೇಮಕ ಮಾಡಿದ್ದರು. ನ್ಯಾ. ನಾಗಮೋಹನ್ ದಾಸ್ ಇಂದು ವರದಿ ಒಪ್ಪಿಸಿದ್ದಾರೆ. ಸಿಎಂ ವರದಿ ಸ್ವೀಕಾರ ಮಾಡಿದ್ದಾರೆ. ಮುಂದಿನ ನಡೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಅಗಲಿದೆ. ನಾವೆಲ್ಲಾ ಒಗ್ಗಟ್ಟಾಗಿ ತೀರ್ಮಾನ ಮಾಡುತ್ತೇವೆ. ವರದಿ ಜಾರಿ ಆಗುತ್ತದೆ ಎಂಬ ವಿಶ್ವಾಸ ನನಗೆ ಇದೆ” ಎಂದಿದ್ದಾರೆ.


















