ಬೆಂಗಳೂರು: ದೇಶದ ಬೃಹತ್ ಐಟಿ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಕಂಪನಿಯ ಇನ್ಫೋಸಿಸ್ ಪ್ರತಿಷ್ಠಾನವು 2025-26ನೇ ಸಾಲಿನಲ್ಲಿ ವಿದ್ಯಾರ್ಥಿನಿಯರಿಗೆ 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಘೋಷಣೆ ಮಾಡಿದೆ. ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಹಾಗೂ ಮ್ಯಾತೆಮ್ಯಾಟಿಕ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ 1 ವರ್ಷಕ್ಕೆ 1 ಲಕ್ಷ ರೂಪಾಯಿ ಸ್ಕಾಲರ್ ಶಿಪ್ ನೀಡುವುದಾಗಿ ಇನ್ಫೋಸಿಸ್ ಫೌಂಡೇಷನ್ ಘೋಷಣೆ ಮಾಡಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು. ಅವರು 12 ನೇ ತರಗತಿ ಪೂರ್ಣಗೊಳಿಸಿರಬೇಕು. ವಿದ್ಯಾರ್ಥಿಗಳು STEM-ಸಂಬಂಧಿತ ಕೋರ್ಸ್ಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪದವಿ ಕೋರ್ಸ್ ಗಳಿಗೆ ದಾಖಲಾಗಿರಬೇಕು. ಅಲ್ಲದೆ, ಎರಡನೇ ವರ್ಷದ ಬಿ.ಆರ್ಕ್ ಅಥವಾ ಐದು ವರ್ಷಗಳ ಇಂಟಿಗ್ರೇಟೆಡ್/ಡ್ಯುಯಲ್ ಪದವಿ ಕೋರ್ಸ್ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಸ್ಕಾಲರ್ ಶಿಪ್ ಗೆ ಆಯ್ಕೆಯಾದ ಅರ್ಜಿದಾರರು ಕೋರ್ಸ್ ನ ಅವಧಿಗೆ (ಗರಿಷ್ಠ ನಾಲ್ಕು ವರ್ಷಗಳವರೆಗೆ) ವರ್ಷಕ್ಕೆ 1 ಲಕ್ಷ ರೂ.ವರೆಗೆ ವಿದ್ಯಾರ್ಥಿವೇತನ ಪಡೆಯುತ್ತಾರೆ. ಇತ್ತೀಚಿನ ಫೋಟೊ, ವಿದ್ಯಾರ್ಹತೆಯ ದಾಖಲೆಗಳು, ಆಧಾರ್ ಕಾರ್ಡ್ ಸೇರಿ ಗುರುತಿನ ಚೀಟಿ, ಯಾವುದೇ ವಿದ್ಯಾಸಂಸ್ಥೆಗೆ ಪ್ರವೇಶ ಪಡೆದಿರುವ ದಾಖಲೆ ಸೇರಿ ಹಲವು ದಾಖಲೆಗಳನ್ನು ನೀಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ https://www.buddy4study.com/page/infosys-stem-stars-scholarship ವೆಬ್ ಸೈಟ್ ಗೆ ಭೇಟಿ ನೀಡಬೇಕು
ಲಾಗಿನ್ ಆದರೆ, ಅಪ್ಲಿಕೇಷನ್ ಪೇಜ್ ಗೆ ತೆರಳಬಹುದು
Infosys Foundation STEM Stars Scholarship Program 2025-26 ಅರ್ಜಿ ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
ಬಳಿಕ ಅರ್ಜಿ ಸಲ್ಲಿಕೆಯಾಗುತ್ತದೆ.