ಬೆಂಗಳೂರು: ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿರುವ ಇಂಡಸ್ಇಂಡ್ ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇರಿಸುವವರಿಗೆ ಶೇ.7ರಷ್ಟು ಬಡ್ಡಿದರ ನೀಡುತ್ತಿದೆ. ಇದರೊಂದಿಗೆ ದೇಶದಲ್ಲಿಯೇ ಎಫ್ ಡಿ ಹೂಡಿಕೆಗೆ ಅತಿ ಹೆಚ್ಚು ಬಡ್ಡಿದರ ನೀಡುವ ಬ್ಯಾಂಕುಗಳಲ್ಲಿ ಇದು ಕೂಡ ಒಂದಾಗಿದೆ. ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಇಂಡಸ್ಇಂಡ್ ಬ್ಯಾಂಕ್ ನಲ್ಲಿಯೇ ಅತಿ ಹೆಚ್ಚು ರಿಟರ್ನ್ಸ್ ಸಿಗುತ್ತಿದೆ. ಹೌದು, ಈ ಬ್ಯಾಂಕಿನಲ್ಲಿ ಸಾಮಾನ್ಯ ಹೂಡಿಕೆದಾರರಿಗೆ ಶೇ.7ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ.7.5ರಷ್ಟು ಬಡ್ಡಿ ನೀಡಲಾಗುತ್ತದೆ.
ನೀವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಒಂದು ವರ್ಷದವರೆಗೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿರೆ 7 ಸಾವಿರ ರೂಪಾಯಿ ಬಡ್ಡಿ ರೂಪದಲ್ಲಿ ಸಿಗುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರೆ, 7,500 ರೂಪಾಯಿ ಬಡ್ಡಿಯ ಲಾಭ ಸಿಗುತ್ತದೆ. ಇದನ್ನೇ ಬೇರೆ ಬ್ಯಾಂಕುಗಳಿಗೆ ಹೋಲಿಸುವುದಾದರೆ, ಆಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಗಳು ಒಂದು ವರ್ಷದ ಎಫ್ ಡಿಗಳ ಮೇಲೆ ಶೇ.6.60ರಷ್ಟು ಬಡ್ಡಿ ನೀಡುತ್ತಿವೆ. ಇದರಿಂದಾಗಿ ನೀವು ವರ್ಷಕ್ಕೆ 1 ಲಕ್ಷ ಹೂಡಿಕೆ ಮಾಡಿದ್ರೆ, 6.600 ಬಡ್ಡಿಯೊಂದಿಗೆ 1,06,600 ರೂ. ಸಿಗುತ್ತದೆ.
ಐಸಿಐಸಿಐ ಬ್ಯಾಂಕ್ ಬ್ಯಾಂಕ್ ಒಂದು ವರ್ಷದ ಎಫ್ ಡಿ ಮೇಲೆ 6.40% ಬಡ್ಡಿದರವನ್ನು ನೀಡುತ್ತಿದೆ. ಇಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಒಂದು ವರ್ಷದ ಬಳಿಕ 1.06 ಲಕ್ಷ ರೂಪಾಯಿ ಸಿಗುತ್ತದೆ. ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಂದು ವರ್ಷದ ಎಫ್ಡಿಗಳ ಮೇಲೆ ಶೇ.6.60 ಬಡ್ಡಿ ನೀಡುತ್ತಿವೆ. ಇಲ್ಲಿಯೂ 6,600 ಬಡ್ಡಿ ಪಡೆಯಬಹುದು.
ಇನ್ನು ದೇಶದಲ್ಲೇ ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಆಗಿರುವ ಎಸ್ ಬಿ ಐನಲ್ಲಿ ಒಂದು ವರ್ಷದ ಎಫ್ ಡಿ ಮೇಲೆ ಶೇ.6.45 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಇಲ್ಲಿ, ಒಂದು ವರ್ಷದಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ, 1,06,450 ರೂಪಾಯಿ ರಿಟನ್ಸ್ ಸಿಗುತ್ತದೆ.
ಗಮನಿಸಿ: ದೇಶದ ಬ್ಯಾಂಕುಗಳಲ್ಲಿರುವ ಎಫ್ ಡಿ ಹೂಡಿಕೆ ಮೇಲಿನ ಬಡ್ಡಿದರದ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಸ್ಟೋರಿಯನ್ನು ಪ್ರಕಟಿಸಲಾಗಿದೆ. ಇದು ಹೂಡಿಕೆಗೆ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆ-ಸೂಚನೆಗಳನ್ನು ಪಡೆಯುವುದನ್ನು ಮರೆಯದಿರಿ.



















