ಜೈಪುರ: ಸುದಾರಣೆ, ಸಾಧನೆ ಮತ್ತು ಪರಿವರ್ತನೆ ಎಂಬ ಮಂತ್ರದ ಮೂಲಕ ಭಾರತ ಸಾಧಿಸಿದ ಅಭಿವೃದ್ಧಿಯನ್ನು ಎಲ್ಲ ವಲಯದಲ್ಲಿಯೂ ಕಾಣಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಶೃಂಗಸಭೆ 2024ನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಎಲ್ಲ ವಲಯಗಳಲ್ಲೂ ಅಭಿವೃದ್ಧಿ ಕಾಣುತ್ತಿರುವುದು ಇಡೀ ವಿಶ್ವಕ್ಕೆ ಗೋಚರವಾಗುತ್ತಿದೆ. ಭಾರತವು ಕಳೆದ 10 ವರ್ಷಗಳಲ್ಲಿ 5ನೇ ಅತಿದೊಡ್ಡ ಆರ್ತಿಕತೆಯಾಗಿ ಬೆಳೆದು ನಿಲ್ಲುತ್ತಿದೆ. ಸ್ವಾತಂತ್ರ್ಯದ ನಂತರದ ಸರ್ಕಾರಗಳ ಆದ್ಯತೆಗಳು ಅಭಿವೃದ್ಧಿಯಾಗಲೀ ಅಥವಾ ಪರಂಪರೆಯಾಗಲೀ ಅಲ್ಲ. ಇಂದು ನಮ್ಮ ಸರ್ಕಾರವು ‘ವಿಕಾಸ್ ಭೀ, ವಿರಾಸತ್ ಭಿ’ ಎಂಬ ಮಂತ್ರದ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಜೈಪುರದಲ್ಲಿ ಡಿಸೆಂಬರ್ 9 ರಿಂದ 11ರವರೆಗೆ ನಡೆಯಲಿರುವ ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಶೃಂಗಸಭೆಯಲ್ಲಿ ಜಾಗತಿಕ ಹೂಡಿಕೆದಾರರು, ಉದ್ಯಮಿಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ.