ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಅಭಿಯಾನ ಇಂದಿನಿಂದ ಆರಂಭವಾಗಲಿದೆ. ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ 6 ಜನ ಭಾರತೀಯ ಆಟಗಾರರು ಪದಕ ಬೇಟೆ ಇಂದಿನಿಂದ ನಡೆಯಲಿದೆ.
ಬಿಲ್ಲುಗಾರಿಕೆ (ಆರ್ಚರಿ) ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್, ಬಿ ಧೀರಜ್, ತರುಣ್‌ದೀಪ್ ರೈ ಮತ್ತು ಪ್ರವೀಣ್ ಜಾಧವ್ ಪದಕಕ್ಕೆ ಬಾಣ ಬಿಡಲಿದ್ದಾರೆ. ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಸ್ಪರ್ಧಿಗಳಾದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್ ಭಾಗವಹಿಸಲಿದ್ದಾರೆ. ನಂತರ ಪುರುಷರ ವೈಯುಕ್ತಿಕ ಶ್ರೇಯಾಂಕ ಸುತ್ತಿನ ಆರ್ಚರಿ ಸ್ಪರ್ಧೆಗಳು ನಡೆಯಲಿವೆ.
ಶ್ರೇಯಾಂಕದ ಸುತ್ತಿನಿಂದ ಅಗ್ರ ನಾಲ್ಕು ಶ್ರೇಯಾಂಕದ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆಯಲಿವೆ. ಎಂಟರಿಂದ 12ನೇ ಶ್ರೇಯಾಂಕದ ತಂಡಗಳು ಉಳಿದ ನಾಲ್ಕು ಕ್ವಾರ್ಟರ್-ಫೈನಲ್ ಸ್ಥಾನಗಳಿಗಾಗಿ ಪೈಪೋಟಿ ನಡೆಸಬೇಕಿದೆ.
ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತು (ದೀಪಿಕಾ ಕುಮಾರಿ, ಭಜನ್ ಕೌರ್, ಅಂಕಿತಾ ಭಕತ್) – ಮಧ್ಯಾಹ್ನ 1:00 PM ಗಂಟೆಗೆ
ಪುರುಷರ ವೈಯಕ್ತಿಕ ಶ್ರೇಯಾಂಕದ ಸುತ್ತು (ತರುಣದೀಪ್ ರೈ, ಧೀರಜ್ ಬೊಮ್ಮದೇವರ, ಪ್ರವೀಣ್ ಜಾಧವ್) – ಸಂಜೆ 5:45 PM ಗಂಟೆಗೆ
ಪ್ಯಾರಿಸ್ ಒಲಿಂಪಿಕ್ಸ್ ನ ಇಂದಿನ ವೇಳಾಪಟ್ಟಿ
• 12:30 PM – ಹ್ಯಾಂಡ್‌ಬಾಲ್ – ಸ್ಲೊವೇನಿಯಾ vs ಡೆನ್ಮಾರ್ಕ್ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು A)
• 1:00 PM – ಬಿಲ್ಲುಗಾರಿಕೆ – ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತು
• 2:30 PM – ಹ್ಯಾಂಡ್‌ಬಾಲ್ – ನೆದರ್‌ಲ್ಯಾಂಡ್ಸ್ vs ಅಂಗೋಲಾ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು B)
• 5:30 PM – ಹ್ಯಾಂಡ್‌ಬಾಲ್ – ಸ್ಪೇನ್ vs ಬ್ರೆಜಿಲ್ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು B)
• 5:30 PM – ರಗ್ಬಿ ಸೆವೆನ್ಸ್ – ಸಮೋವಾ vs ಕೀನ್ಯಾ (ಪುರುಷರ ಪೂಲ್ ಬಿ)
• 5:45 PM – ಬಿಲ್ಲುಗಾರಿಕೆ – ಪುರುಷರ ವೈಯಕ್ತಿಕ ಶ್ರೇಯಾಂಕದ ಸುತ್ತು
• 6:00 PM- ರಗ್ಬಿ ಸೆವೆನ್ಸ್ – ಅರ್ಜೆಂಟೀನಾ vs ಆಸ್ಟ್ರೇಲಿಯಾ (ಪುರುಷರ ಪೂಲ್ ಬಿ)
• 6:30 PM – ರಗ್ಬಿ ಸೆವೆನ್ಸ್ – ಯುನೈಟೆಡ್ ಸ್ಟೇಟ್ಸ್ vs ಉರುಗ್ವೆ (ಪುರುಷರ ಪೂಲ್ ಸಿ)
• 7:00 PM – ರಗ್ಬಿ ಸೆವೆನ್ಸ್ – ಫಿಜಿ vs ಫ್ರಾನ್ಸ್ (ಪುರುಷರ ಪೂಲ್ ಸಿ)
• 7:30 PM – ಹ್ಯಾಂಡ್‌ಬಾಲ್ – ಜರ್ಮನಿ vs ಕೊರಿಯಾ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು A)
• 7:30 PM- ರಗ್ಬಿ ಸೆವೆನ್ಸ್ – ಸೌತ್ ಆಫ್ರಿಕಾ vs ಜಪಾನ್ (ಪುರುಷರ ಪೂಲ್ ಎ)
• 8:00 PM – ರಗ್ಬಿ ಸೆವೆನ್ಸ್ – ನ್ಯೂಝಿಲೆಂಡ್ ಐರ್ಲೆಂಡ್ (ಪುರುಷರ ಪೂಲ್ ಎ)
• 8:30 PM – ಫುಟ್ಬಾಲ್ – ಕೆನಡಾ vs ನ್ಯೂಝಿಲೆಂಡ್ (ಮಹಿಳೆಯರ ಗುಂಪು A)
• 8:30 PM – ಫುಟ್ಬಾಲ್ – ಸ್ಪೇನ್ vs ಜಪಾನ್ (ಮಹಿಳೆಯರ ಗುಂಪು C)
• 10:30 PM – ಫುಟ್ಬಾಲ್ – ಜರ್ಮನಿ vs ಆಸ್ಟ್ರೇಲಿಯಾ (ಮಹಿಳೆಯರ ಗುಂಪು B)
• 10:30 PM – ಫುಟ್ಬಾಲ್ – ನೈಜೀರಿಯಾ vs ಬ್ರೆಜಿಲ್ (ಮಹಿಳೆಯರ ಗುಂಪು C)
• 10:30 PM – ಫುಟ್ಬಾಲ್ – ಹಂಗೇರಿ vs ಫ್ರಾನ್ಸ್ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು B)
• 11:30 PM- ರಗ್ಬಿ ಸೆವೆನ್ಸ್ – ಶ್ರೇಯಾಂಕ 9 vs ಒಟ್ಟಾರೆ ಶ್ರೇಯಾಂಕ 12 (ಪುರುಷರ ಸ್ಥಾನ 9-12)
• 12:00 AM – ರಗ್ಬಿ ಸೆವೆನ್ಸ್ – ಒಟ್ಟಾರೆ ಶ್ರೇಯಾಂಕ 10 vs ಒಟ್ಟಾರೆ ಶ್ರೇಯಾಂಕ 11 (ಪುರುಷರ ಸ್ಥಾನ 9-12)
• 12:30 AM – ಫುಟ್ಬಾಲ್ – ಫ್ರಾನ್ಸ್ vs ಕೊಲಂಬಿಯಾ (ಮಹಿಳೆಯರ ಗುಂಪು A)
• 12:30 AM – ಫುಟ್ಬಾಲ್ – ಯುನೈಟೆಡ್ vs ವಿರುದ್ಧ ಜಾಂಬಿಯಾ (ಮಹಿಳಾ ಗುಂಪು B)
• 12:30 AM – ಹ್ಯಾಂಡ್‌ಬಾಲ್ – ನಾರ್ವೆ vs ಸ್ವೀಡನ್ (ಮಹಿಳೆಯರ ಪ್ರಾಥಮಿಕ ಸುತ್ತಿನ ಗುಂಪು A)
• 12:30 AM – ರಗ್ಬಿ ಸೆವೆನ್ಸ್ – ಪೂಲ್ A ನಲ್ಲಿ 1 ನೇ vs ಒಟ್ಟಾರೆ ಶ್ರೇಯಾಂಕದಲ್ಲಿ 8 ನೇ (ಪುರುಷರ ಕ್ವಾರ್ಟರ್ ಫೈನಲ್ಸ್)
• 01:00 AM – ರಗ್ಬಿ ಸೆವೆನ್ಸ್ – ಪೂಲ್ B ನಲ್ಲಿ 2 ನೇ vs ಪೂಲ್ C 2ನೇ (ಪುರುಷರ ಕ್ವಾರ್ಟರ್ ಫೈನಲ್)
• 01:30 AM – ರಗ್ಬಿ ಸೆವೆನ್ಸ್ – ಪೂಲ್ C ನಲ್ಲಿ 1 ನೇ vs ಪೂಲ್ Aನಲ್ಲಿ 1ನೇ (ಪುರುಷರ ಕ್ವಾರ್ಟರ್‌ಫೈನಲ್‌ನಲ್ಲಿ)
• 02:00 AM – ರಗ್ಬಿ ಸೆವೆನ್ಸ್ – ಪೂಲ್ B ನಲ್ಲಿ 1ನೇ vs ಒಟ್ಟಾರೆ ಶ್ರೇಯಾಂಕದಲ್ಲಿ 7ನೇ (ಪುರುಷರ ಕ್ವಾರ್ಟರ್ ಫೈನಲ್)